ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಸಂಬಂಧಿಯೊಬ್ಬರ ಜತೆಗೆ ನಾಲೆ ಬಳಿ ಆಟೋ ತೊಳೆಯಲೆಂದು ಬಂದಿದ್ದ ಬಾಲಕ ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ದಾವಣಗೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮ ಸಮೀಪದ ಭದ್ರಾ ನಾಲೆಯಲ್ಲಿ ನಡೆದಿದೆ.
3ನೇ ತರಗತಿ ಓದುತ್ತಿದ್ದ ಮನೋಜ್ (9) ಕೊಚ್ಚಿ ಹೋಗಿರುವ ಬಾಲಕನಾಗಿದ್ದು, ಅಗ್ನಿಶಾಮಕದಳ ಹಾಗೂ ಈಜುಗಾರರ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ.
ಮನೋಜ್, ಆವರಗೆರೆ ಗೋಶಾಲೆ ನಿವಾಸಿ ಷಣ್ಮುಖಾಚಾರಿ ಎಂಬವರ ಮಗನಾಗಿದ್ದು, ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

