ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭದ್ರಾ 5300 ಕೋಟಿ ವಿಚಾರದಲ್ಲಿ ರಾಜಕಾರಣ ಮಾಡುವುದು ಬೇಡ. ಪ್ರಸ್ತುತ ಏನೇನಾಗಿದೆ ಎಂದು ವಾಸ್ತವತೆ ಅರೆಯೋಣ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ತಿಳಿಸಿದ್ದಾರೆ.
ಕೇಂದ್ರದಿಂದ ಬರೋ ಬಹುಪಾಲು ಹಣವನ್ನೆಲ್ಲಾ ಲೂಟಿಗೋ ಅಥವಾ ಗ್ಯಾರಂಟಿ ಲೂಟಿಗೋ ವಿನಯೋಗಿಸೋ ಸಿದ್ರಾಮಯ್ಯ ಸರ್ಕಾರ ಮಧ್ಯ ಕರ್ನಾಟಕಕ್ಕೆ ನೀರುಣಿಸುವ ಕನಸಿನ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೇಂದ್ರದ 5300 ಕೋಟಿ ಬಂದಿಲ್ಲ ಎಂದು ಒಣ ರಾಜಕೀಯಕ್ಕೆ ಮುಂದಾಗಿದೆ ಎಂದು ನವೀನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಾಸ್ತವ ಆಗಿದ್ದೇನು? ಆಗುತ್ತಿರುವುದೇನು? ಎಲ್ಲವನ್ನೂ ಪರಿಷತ್ ಅಂಗಳದಲ್ಲೇ ತೆರೆದಿಡುವ ಪ್ರಯತ್ನ ಮಾಡಿದ್ದೇನೆಂದು ಪರಿಷತ್ ಸದಸ್ಯ ನವೀನ್ ಕೆ ಎಸ್ ತಿಳಿಸಿದ್ದಾರೆ.
ಈ ವಿಚಾರವಾಗಿ ಇನ್ನು ತಡ ಬೇಡ. ರಾಜಕಾರಣವೂ ಬೇಡ. ರಾಜ್ಯ ಸರ್ಕಾರ ಈ ಸಾಲಿನ ಬಜೆಟ್ ನಲ್ಲಿ ಬಹುಮುಖ್ಯ ಅನುದಾನವನ್ನು ಭದ್ರಾ ಮೇಲ್ದಂಡೆಗೆ ಘೋಷಿಸಲಿ ಎಂದು ಅವರು ತಾಕೀತು ಮಾಡಿದರು.
ಜೊತೆಗೆ ಕೇಂದ್ರಕ್ಕೆಒದಗಿಸಬೇಕಾದ ಪತ್ರ ದಾಖಲೆಗಳನ್ನಿತ್ತು ಅಲ್ಲಿಂದಲೂ ಹಣ ತರಲಿ, ಅದಕ್ಕೆ ಭಾ ಜ ಪ ಬದ್ಧವಾಗಿದೆ ಎಂದು ನವೀನ್ ಸವಾಲ್ ಹಾಕಿದರು.

