ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಹಳಷ್ಟು ವರ್ಷಗಳ ನಂತರ ತೆಂಗಿಗೆ ಉತ್ತಮ ಬೆಲೆ ಸಿಗುತ್ತಿದೆ. ಈ ವಿಚಾರದಲ್ಲಿ ರೈತರಿಗೆ ಸಂತಸವಿದೆ. ತೆಂಗಿನ ಗರಿಗೆ ಕಪ್ಪು ಚುಕ್ಕೆ ಸಿಡೆ ರೋಗ ಕಾಟ ಹೆಚ್ಚಿದೆ. ಇತ್ತೀಚಿನ ಕೆಲವು ದಿನಗಳ ಹಿಂದೆ ತೆಂಗಿನ ಮರದಲ್ಲಿ ಗಮನಿಸಿದೆ. ಈ ಸಿಡೆ ಹೊಂಬಾಳೆಗು ತಗುಲಿ ಬೆಳೆ ಕಮ್ಮಿಯಾಗುತ್ತಿದೆ. ಆ ಕಾರಣಕ್ಕೆ ಔಷಧಿ ಸಿಂಪರಣೆ ಮಾಡಬೇಕು ಎಂದು ರೈತರು ಹೇಳಿದ ವಿಚಾರ ನಾನು ಕೇಳಿದ್ದೇನೆ.
ಈ ವಿಚಾರದಲ್ಲಿ ನಾನು ರೈತರನ್ನು ಪ್ರಶ್ನೆ ಮಾಡಿದೆ ಸಣ್ಣ ಮರಗಳಿಗೆ ಔಷಧಿ ಸಿಂಪರಣೆ ಮಾಡಬಹುದು. ದೊಡ್ಡ ದೊಡ್ಡ ಮರಗಳಿಗೆ ಏನು ಮಾಡಬೇಕು ಎಂದು ಪ್ರಶ್ನಿಸಿದೆ. ಆ ವಿಚಾರದಲ್ಲಿ ರೈತ ಹೇಳಿದ್ದು ದೊಡ್ಡ ಮರಗಳಿಗೂ ಔಷಧಿ ಸಿಂಪರಣೆ ಮಾಡಬಹುದು ಅದಕ್ಕೂ ಉಪಕರಣಗಳು ಇವೆ ಆದರೆ ಕಷ್ಟದ ಕೆಲಸ ಎಂದು ವಿವರಿಸಿದರು.
ಬಯಲು ಸೀಮೆಯ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ 2020ಕ್ಕೂ ಹಿಂದಿನ ದಿನಗಳಲ್ಲಿ ಸುಮಾರು 30 ವರ್ಷಗಳ ಕಾಲ ಈ ಭಾಗದಲ್ಲಿ ಮಳೆ ಅಭಾವ ಆ ದಿನದಲ್ಲಿ ಬಹಳಷ್ಟು ತೆಂಗಿನ ಮರಗಳು ಒಣಗಿ ಹೋದ ವಿಷಯ ತಿಳಿದ ವಿಷಯವೇ.
ಈ ಭಾಗದಲ್ಲಿ ಯಾವೊಬ್ಬ ರೈತರಿಗೂ ತೆಂಗು ಸೇರಿದಂತೆ ಇನ್ನಿತರೆ ಮರಬಳ್ಳಿಗಳನ್ನು ಬೆಳೆಯಲು ಧೈರ್ಯ ಹಾಗೂ ಹುಮ್ಮಸ್ಸು ಇರಲಿಲ್ಲ ಕಾರಣ ನೀರಿನ ಅಭಾವ. ಕಳೆದ ಮೂರು ವರ್ಷಗಳಿಂದ ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಅಣೆಕಟ್ಟಿಗೆ ನೀರು ತುಂಬಿಸುವ ಯೋಜನೆ ಯಶಸ್ಸು ಕಂಡಿದೆ. ಆ ಕಾರಣಕ್ಕೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಅಂತರ್ಜಲ ವೃದ್ಧಿಗೆ ಕಾರಣವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ರೈತರು ಮರಬಳ್ಳಿಗಳ ಬೆಳೆಯನ್ನು ಬೆಳೆಯಲು ಮುಂದಾಗುತ್ತಾರೆ ಎಂದು ರಘುಗೌಡ ತಿಳಿಸಿದ್ದಾರೆ.