ಎರಡು ತಿಂಗಳಲ್ಲಿ ಹೊಳಲ್ಕೆರೆಗೆ ಭದ್ರಾ ನೀರು-ಶಾಸಕ ಚಂದ್ರಪ್ಪ

News Desk

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ :
ಎರಡು ತಿಂಗಳೊಳಗೆ ಹೊಳಲ್ಕೆರೆ ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಗೆ ಅಪ್ಪರ್‌ ಭದ್ರಾದಿಂದ ನೀರು ಹರಿಯುವುದರಲ್ಲಿ ಸಂಶಯವಿಲ್ಲವೆoದು ಹೊಳಲ್ಕೆರೆ ಶಾಸಕ ಡಾ.ಎಂ.ಚoದ್ರಪ್ಪ ಭರವಸೆ ನೀಡಿದರು.

ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿ ಬಳಿ ಭದ್ರಾ ಜಲಾಶಯಕ್ಕೆ ರೈತರು ಮತ್ತು ಅಪಾರ ಕಾರ್ಯಕರ್ತರೊಂದಿಗೆ ತೆರಳಿ ಭಾನುವಾರ ಬಾಗಿನ ಸಮರ್ಪಿಸಿ ಮಾತನಾಡಿದರು.

- Advertisement - 

ಹೊಳಲ್ಕೆರೆ ತಾಲ್ಲೂಕಿನ ೩೭ ಕೆರೆಗಳಿಗೆ ಹಾಗೂ ಚಿತ್ರದುರ್ಗ ಜಿಲ್ಲೆಗೆ ಇಲ್ಲಿಂದ ನೀರು ಹರಿಯಲಿದೆ. ಇದರಿಂದ ರೈತರ ಬಹುದಿನಗಳ ಕನಸು ನನಸಾಗಲಿದೆ. ರಾಜ್ಯದ ಹದಿಮೂರು ಜಿಲ್ಲೆಗಳಲ್ಲಿ ಬರಗಾಲವಿದೆ. ಇನ್ನು ೧೨೦ ಮೀಟರ್ ಕಾಲುವೆ ಕಾಮಗಾರಿ ಪೂರ್ಣಗೊಂಡರೆ ಹೊಳಲ್ಕೆರೆ ಲೆಫ್ಟ್ ಕೆನಾಲ್‌ಗೆ ನೀರು ಬರುತ್ತದೆ. ಮುಂದೆ ಪಾವಗಡದವರೆಗೂ ನೀರು ಹರಿಯುತ್ತದೆ ಎಂದು ಹೇಳಿದರು.

ಚಿಕ್ಕಮಗಳೂರು ಭಾಗದ ರೈತರು ಅಡ್ಡಿಪಡಿಸುತ್ತಿರುವ ಪರಿಣಾಮವಾಗಿ ಕಾಮಗಾರಿಯಲ್ಲಿ ಸ್ವಲ್ಪ ತಡವಾಗಿದೆ. ಕೋರ್ಟ್ನಲ್ಲಿ ಕೇಸಿದೆ. ಎಲ್ಲವನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳೋಣ ಎಂದು ತರಿಕೆರೆ ಶಾಸಕ ಶ್ರೀನಿವಾಸ್ ಮಾತು ಕೊಟ್ಟಿದ್ದಾರೆ. ಹಾಗಾಗಿ ರೈತರು ನಿರಾಸೆಯಾಗುವುದು ಬೇಡ.

- Advertisement - 

ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿಯೂ ನಮ್ಮ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆAದಿದ್ದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ. ರೈತರ ಪರವಾಗಿರುವ ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಬಾರದು. ಹಣ ನೀಡಿ ಚಿನ್ನ ಖರೀಧಿಸಬಹುದು.

ಆದರೆ ನೀರು ಸಿಗುವುದು ಕಷ್ಟವಾಗಿದೆ. ಯಾವಾಗ ನೀರು ಬರುತ್ತದೋ ಎಂದು ರೈತರು ಕಾಯುತ್ತಿದ್ದಾರೆ. ೧೨೦ ಮೀಟರ್ ಚಾನಲ್ ಆದರೆ ಗಂಗಸಮುದ್ರ ಕೆರೆಗೆ ನೀರು ಬರುತ್ತದೆ. ಅಲ್ಲಿಂದ ಹೊಳಲ್ಕೆರೆ ತಾಲ್ಲೂಕಿನ ೩೭ ಕೆರೆಗಳಿಗೂ ನೀರು ಸೇರುತ್ತದೆ ಎಂದರು.

ಹೊಳಲ್ಕೆರೆ ಬಿಜೆಪಿ. ಮಂಡಲ ಅಧ್ಯಕ್ಷ ನಾರದಮುನಿ ವಸಂತಕುಮಾರ್, ರೈತ ಮುಖಂಡರುಗಳಾದ ಬಸ್ತಿಹಳ್ಳಿ ಸುರೇಶ್‌ಬಾಬು, ಮಂಜುನಾಥ್, ಚಿತ್ರಹಳ್ಳಿ ಲವಕುಮಾರ್

ನಾಗರಾಜ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಶಿವಕುಮಾರ್, ಯಶವಂತ್‌ಕುಮಾರ್, ಮಾರುತೇಶ್, ಶ್ರೀನಿವಾಸ್, ಮಹೇಶಣ್ಣ, ಕುಮಾರಣ್ಣ, ರೂಪ ಸುರೇಶ್, ನಾಗರಾಜ್‌ಬೇದ್ರೆ ಭದ್ರಾಮೇಲ್ದಂಡೆ ಮುಖ್ಯ ಇಂಜಿನಿಯರ್‌ಗಳಾದ ಎಫ್.ಹೆಚ್.ಲಮಾಣಿ, ಕವಿತಾ, ಬಾರಿಕರ್ ಚಂದ್ರಪ್ಪ,ನಾಗರಾಜ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

 

Share This Article
error: Content is protected !!
";