ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಂಡ ಹಾಗೂ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಪಕ್ಷದ ಸುಳ್ಳು ಮತ್ತೊಮ್ಮೆ ಬೆತ್ತಲು!! ಆಗಿದೆ ಎಂದು ಬಿಜೆಪಿ ತಿಳಿಸಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ್ದ 40 ಪರ್ಸೆಂಟ್‌ಆರೋಪ ಸಂಪೂರ್ಣ ಸುಳ್ಳು ಎಂಬುದು ಈಗ ಸಾಬೀತಾಗಿದೆ. 40 ಪರ್ಸೆಂಟ್‌ಆರೋಪಕ್ಕೆ ಸಾಕ್ಷಿಯನ್ನು ಅತ್ತ ಕಾಂಗ್ರೆಸ್‌ಸಹ ನೀಡುತ್ತಿಲ್ಲ – ಇತ್ತ ಗುತ್ತಿಗೆದಾರ ಸಂಘ ಸಹ ನೀಡುತ್ತಿಲ್ಲ!!
ಸಿಎಂ ಸಿದ್ದರಾಮಯ್ಯ ಅವರೆ, ಡಿಸಿಎಂ ಡಿ.ಕೆ ಶಿವಕುಮಾರ್ ಅವರೆ, ನಿಮಗೆ ನಿಜಕ್ಕೂ ದಮ್ಮು-ತಾಕತ್ತಿದ್ದರೆ, ನಿಮ್ಮ ಆರೋಪಕ್ಕೆ ಸೂಕ್ತ ಸಾಕ್ಷ್ಯ ನೀಡಿ ಎಂದು ಬಿಜೆಪಿ ಸವಾಲ್ ಹಾಕಿದೆ.