ಭರತನಾಟ್ಯ ರಂಗಪ್ರವೇಶ ಮಾಡಲಿರುವ ಸ್ನೇಹಶ್ರೀ

News Desk

ಭರತನಾಟ್ಯ ರಂಗಪ್ರವೇಶ ಮಾಡಲಿರುವ ಸ್ನೇಹಶ್ರೀ

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:ಭರತನಾಟ್ಯ ಕಲಿಕಾ ನಿರತ ವಿದ್ಯಾಥಿಗಳಿಗೆ ತಮ್ಮ ನೃತ್ಯ ಜೀವನದ ಅತ್ಯಂತ ಮಹತ್ವದ ಘಟಟವೇ ಈ ರಂಗಪ್ರವೇಶ. ಇದುವರೆಗೂ ಗುರುಗಳ ನೃತ್ಯ ಗರಡಿಯಲ್ಲಿ ಪಳಗಿ ನೃತ್ಯ ಶಾಸ್ತ್ರಗಳ ಅಧ್ಯಯನವನ್ನು ಶಿಸ್ತುಬದ್ದವಾಗಿ ಕಲಿತು ಅವರ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿ ಮುಂದಿನ ಹಂತಕ್ಕೆ ತಯಾರಾಗುವ ಪ್ರಕ್ರಿಯೆ ಇದು.

- Advertisement - 

ಇಂತಹ ಪ್ರಕ್ರಿಯೆಗೆ ಸಹಚೇತನ ನಾಟ್ಯಾಲಯದ ನೃತ್ಯಗುರು ಸಹನಾ ಚೇತನ್ ಅವರ ಹಿರಿಯ ಶಿಷ್ಯೆ ಸ್ನೇಹಶ್ರೀ ಎಸ್.ಜಿ. ಚಾಲನೆ ನೀಡಲಿದದು, ಜುಲೈ ೨೭ರ ಸಂಜೆ ೫.೩೦ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಇವರು ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.

ನೃತ್ಯವೆಂದರೆ ಅದೊಂದು ಆತ್ಮಾನುಭಾವದ ಅಭಿವ್ಯಕ್ತಿ. ಆನಂದದ ಪರಾಕಷ್ಠೆಯ ಅನುಭೂತಿ. ಇಂಥಹದೊಂದು ಭಾವಸ್ಪಂದನ ಗುರುವಿನ ಮಾರ್ಗದರ್ಶನದಲ್ಲಿ ಹೊರಹೊಮ್ಮಿದಾಗ ನರ್ತನದ ಸಾಧಕರಿಗೂ ದರ್ಶಕರಿಗೂ ಸಿಗುವ ಅನುಭವ ಅನನ್ಯ. ಇಂತಹ ಅನುಭವವನ್ನು ನೀಡಲು ಸ್ನೇಹಶ್ರೀ ಎಸ್.ಜಿ. ಕಾಲಿಗೆ ಗೆಜ್ಜೆ ಕಟ್ಟಿ ಸನ್ನದ್ಧರಾಗಿದ್ದಾರೆ. 

- Advertisement - 

ಸಹಚೇತನ ನಾಟ್ಯಾಲಯವು ೨೦ನೆಯ ದಶಕಕ್ಕೆ ಕಾಲಿಟ್ಟಿರುವ ಸುಸಂದರ್ಭದಲ್ಲಿ ತಮ್ಮ ಕುಟುಂಬದವರ ಸಹಕಾರ ಹಾಗೂ ಸಹಚೇತನದ ಬಳಗದ ಸಹಯೋಗದಲ್ಲಿ ತಮ್ಮ ಹಿರಿಯ ಶಿಷ್ಯೆ ಸ್ನೇಹಶ್ರೀ ಎಸ್. ಜಿ. ಇವರು ಜುಲೈ ೨೭ರ ಸಂಜೆ ೫.೩೦ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ ಎಂದು ನೃತ್ಯಗುರು ಸಹನಾ ಚೇತನ್ ತಿಳಿಸಿದರು.

ಸ್ನೇಹಶ್ರೀಯವರು ಶಿವಮೊಗ್ಗದ ಪ್ರಖ್ಯಾತ ವೇದ ವಿದ್ವಾಂಸ ಕೃಷ್ಣಸೋಮಯಾಜಿ ಹಾಗೂ ಸರೋಜ ದಂಪತಿ ಮೊಮ್ಮಗಳು ಹಾಗೂ ಗಿರೀಶ್‌ ಎಸ್. ಜಿ ಮತ್ತು ಮಾಲಿನಿ ಇವರ ಸುಪುತ್ರಿ ಹಾಗೆಯೇ ವೇದ ವಿದ್ವಾನ್ ರವಿಶಂಕರ್ ಸೋಮಯಾಜಿ ಹಾಗೂ ಶ್ವೇತಾರವರ ಸೋದರ ಸೊಸೆ ಎಂದು ತಿಳಿಸಿದರು.

ರಂಗಪ್ರವೇಶದ ನಟುವಾಂಗದಲ್ಲಿ ಸ್ವತಃ ನೃತ್ಯಗುರು ಸಹನಾ ಚೇತನ್ ಇರಲಿದ್ದು, ಹಾಡುಗಾರಿಕೆಯಲ್ಲಿ ಬೆಂಗಳೂರಿನ ವಿದ್ವಾನ್ ವಿನಯ್ ರಾಜಮಾನ್ಯ, ಮೃದಂಗ ವಾದನದಲ್ಲಿ ಮೈಸೂರಿನ ಪ್ರಖ್ಯಾತ ಹಿರಿಯ ಕಲಾವಿದರಾದ ಶಿವಶಂಕರಸ್ವಾಮಿ, ಕೊಳಲು ವಾದನದಲ್ಲಿಮೈಸೂರಿನ ವಿದ್ವಾನ್ ಸಮೃದ್ಧ್ ಶ್ರೀನಿವಾಸನ್, ಬೆಳಕಿನ ಸಹಕಾರದಲ್ಲಿ ಶಿವಕುಮಾರ್ ತೀರ್ಥಹಳ್ಳಿ ಇವರು ಜೊತೆಗೂಡಲಿದ್ದಾರೆ.

ರಂಗಸಜ್ಜಿಕೆ ಮಹೇಶ್ ಆರ್ಟ್ಸ್‌ನವರದ್ದಾಗಿದೆ. ಡಾ. ನಾಗಮಣಿ ಆನಂದ್‌ರಾಮ್ ಹಾಗೂ ಡಿ.ಆರ್.ರವೀನಾ ನಿರೂಪಿಸಲಿದ್ದಾರೆ ಎಂದರು.

ವೇದಿಕೆಯ ಗುರುವಂದನಾ ಕಾರ್ಯಕ್ರಮವನ್ನ್ಲು ಮೈಸೂರಿನ ಹಿರಿಯ ನೃತ್ಯ ವಿದ್ವಾಂಸರು ಹಾಗೂ ನೃತ್ಯಾಲಯ ಟ್ರಸ್ಟ್‌ನ ಸಂಸ್ಥಾಪಕರಾದ ಡಾ. ತುಳಸೀ ರಾಮಚಂದ್ರ ಉದ್ಘಾಟಿಸಲಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ವೇದಿಕೆಯಲ್ಲಿ ನೃತ್ಯಗುರು ಸಹನಾ ಚೇತನ್ ಉಪಸ್ಥಿತರಿರುವರು.

ಶಾಸಕರು ಹಾಗೂ ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷರಾದ ಎಸ್.ಎನ್. ಚನ್ನಬಸಪ್ಪ(ಚನ್ನಿ) ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಚೇತನ್ ಎಸ್., ಸ್ನೇಹಶ್ರೀ ಎಸ್.ಜಿ., ಗಿರೀಶ್‌ಎಸ್.ಜಿ., ಮಾಲಿನಿ, ಡಾ. ನಾಗಮಣಿ, ಆನಂದರಾಮ್, ಸಿಂಧುಶ್ರೀ ಅಡಿಗ ಉಪಸ್ಥಿತರಿದ್ದರು. 

 

Share This Article
error: Content is protected !!
";