ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕೇಂದ್ರ ಶಿಕ್ಷಣ ಸಚಿವಾಲಯದ ಭಾರತೀಯ ಭಾಷಾ ಸಮಿತಿ ಹಾಗೂ ಭಾರತೀಯ ಶಿಕ್ಷಣ ಮಂಡಲ. ಕರ್ನಾಟಕ ಇವುಗಳ ಸಹಯೋಗದೊಂದಿಗೆ, ಯಾಜ್ಞವಲ್ಕ್ಯ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ 2026ರ ಜನವರಿ 5 ಮತ್ತು 6 ರಂದು “ಭಾರತೀಯ ಭಾಷಾ ಪರಿವಾರ” ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಯಾಜ್ಞವಲ್ಕ್ಯ ವಿಜ್ಞಾನ ಪದವಿ ಪೂರ್ವ ಕಾಲೇಜು, ಭೀಮನಬಂಡೆಯಲ್ಲಿ ಆಯೋಜಿಸಲಾಗಿದೆ.
ದೇಶದ ವಿವಿಧ ಭಾಷೆಗಳ ನಡುವಿನ ಸಂಬಂಧ ಮತ್ತು ಭಾರತೀಯ ಭಾಷಾ ಪರಂಪರೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ. ಎಂದು ಯಾಜ್ಞವಲ್ಕ್ಯ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸುರೇಶ್.ಟಿ ತಿಳಿಸಿರುತ್ತಾರೆ.
ಸಂಶೋಧನಾ ಪ್ರಬಂಧ ಮಂಡಣೆಗೆ ಅಭ್ಯರ್ಥಿಗಳ ಹೆಸರನ್ನು ನೊಂದಾಯಿಸಲು ಕೊನೆಯ ದಿನಾಂಕ : 3ನೇ ಜನವರಿ 2026.
ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಈ ಗೂಗಲ್ ಫಾರ್ಮ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
Lhttps://docs.google.com/forms/d/e/1FAIpQLSfBDvSNOMQrektOVKkCZRNyu_H4aUp9JGtJ3oVy3UsQFmlDaQ/viewform?usp=dialog
ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿ ಶ್ರೀನಿವಾಸ್ ಮೂರ್ತಿ ಮತ್ತು ಸಮ್ಮೇಳನದ ಆಯೋಜಕ ಪ್ರಶಾಂತ್ (8296515932), ಸಂಪರ್ಕಿಸಬಹುದು.

