ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ರವರ “ಭೀಮ ಹೆಜ್ಜೆ” ಭೀಮ ರಥಯಾತ್ರೆ ನಿಮಿತ್ತ ಟಿ ಶರ್ಟ್ ಬಿಡುಗಡೆ ಮಾಡಲಾಯಿತು.
ಚಿತ್ರದುರ್ಗದ ನಗರಕ್ಕೆ ಆಗಮಿಸಿದ ಭೀಮ ಹೆಜ್ಜೆ ರಥಯಾತ್ರೆ ವೀರ ಮದಕರಿ ನಾಯಕ ವೃತ್ತದಲ್ಲಿ ವೀರ ಮದಕರಿ ನಾಯಕ ಪುತ್ಥಳಿ ಹಾಗೂ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ ಗೌರವ ಸಲ್ಲಿಸಿ ಭೀಮ ಹೆಜ್ಜೆಯ “ಟೀ ಶರ್ಟ್” ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕೋಲಾರದ ಮಾಜಿ ಸಂಸದ ಮುನಿಸ್ವಾಮಿ ಹಾಗೂ ಎಂಎಲ್ಸಿ ಕೆ ಎಸ್ ನವೀನ್, ಎಸ್ ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಮಹೇಂದ್ರ, ಜಿಲ್ಲಾ ಅಧ್ಯಕ್ಷ ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್, ಎಸ್ ಸಿ ಮೋರ್ಚಾ ಮುಖಂಡರಾದ ದೀಪಾ ಶ್ರೀನಿವಾಸ್, ಲೋಹಿತ್, ಭಾರ್ಗವಿ ದ್ರಾವಿಡ್, ಶ್ರೀನಿವಾಸ್ ಮತ್ತು ಮೋಹನ್ ಆದರ್ಶ ಸುರೇಶ್ ನಾಯ್ಕ್ ಪರುಶುರಾಮ್ ಉಪಸ್ಥಿತರಿದ್ದರು.