ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕರ್ನಾಟಕ ಶಾಸಕಾಂಗದ ಮೆಲ್ಮನೆಯಾದ ವಿಧಾನಪರಿ?ತ್‌ಗೆ ಭೋವಿ ಸಮುದಾಯ ತೀರ್ಥಹಳ್ಳಿಯ ವರಲಕ್ಷ್ಮಿ ಬಿ. ಇವರನ್ನು ನೇಮಕ ಮಾಡುವ ಮೂಲಕ ಭೋವಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಈ ಸಮುದಾಯದ ಮುಖಂಡರುಗಳಾದ ಹನುಮಂತಪ್ಪ, ತಿರುಮಲೇಶ್ ಮತ್ತು ಪೂಜಾರಿ ಕೋಟಪ್ಪ ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮಕರಣ ಮಾಡಲು ಕರ್ನಾಟಕ ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಈ ಪೈಕಿ ಒಂದು ಸ್ಥಾನವನ್ನು ಭೋವಿ ಸಮುದಾಯದ ಕಾಂಗ್ರೆಸ್‌ನ ನಿಷ್ಠಾವಂತ ಕಟ್ಟಾಳು, ಸ್ತ್ರೀಶಕ್ತಿ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಮಹಿಳಾ ಮುಖಂಡರಾದ ವರಲಕ್ಷ್ಮಿ ಅವರನ್ನು ನಾಮ ನಿರ್ದೇಶನ ಮಾಡಬೇಕೆಂಬುದು ಸಮುದಾಯದ ಬಹುತೇಕರ ಬೇಡಿಕೆಯಾಗಿದೆ.
ವರಲಕ್ಷ್ಮಿ ಇವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ, ಕಾಂಗ್ರೆಸ್ ಹಾಗೂ ಭೋವಿ ಸಮುದಾಯದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಮುದಾಯದ ಸಂಘಟನೆಗೆ ಒತ್ತು ಕೊಟ್ಟು ಪರಿಶ್ರಮಿಸುತ್ತಿದ್ದಾರೆ.. ಕಾಂಗ್ರೆಸ್‌ನ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿರುವ ಇವರು ರಾಜ್ಯದೆಲ್ಲೆಡೆ ಸಂಚರಿಸಿ ಸಮುದಾಯವನ್ನು ಕಾಂಗ್ರೆಸ್‌ಗೆ ಸೆಳೆದು ಸಂಘಟಿಸುವಲ್ಲಿ ಸಮರ್ಥರಾಗಿದ್ದಾರೆ.
ಕಾಂಗ್ರೆಸ್‌ನ ನಿಷ್ಠಾವಂತ ನಾಯಕ, ಭೋವಿ ಸಮಾಜದ ಮುಖಂಡ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸಪುರ (ವಿವಿ ಪುರ) ಗ್ರಾಪಂಗೆ ಸತತ ಮೂರು ಬಾರಿ ಆಯ್ಕೆಯಾಗಿದ್ದ, ತಮ್ಮ ಈ ಇಳಿ ವಯಸ್ಸಿನಲ್ಲಿಯೂ ಭೋವಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ತಳವಾರಟ್ಟಿ ಭೂತಣ್ಣ ಹೆಚ್. ಇವರ ಮಗಳಾಗಿರುವ ವರಲಕ್ಷ್ಮಿ ಇವರು ವಿದ್ಯಾರ್ಥಿ ದೆಸೆಯಿಂದಲೂ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ವಿವಾಹ ನಂತರ ತೀರ್ಥಹಳ್ಳಿಯಲ್ಲಿ ನೆಲೆಸಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ.
ತೀರ್ಥಹಳ್ಳಿಯ ಬೊಮ್ಮರಸಾಯನ ಅಗ್ರಹಾರದ ವರಲಕ್ಷ್ಮಿ ಕೋಂ ಪ್ರಕಾಶ್ ಇವರು ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಸದಸ್ಯರಾಗಿ, ತೀರ್ಥಹಳ್ಳಿ ತಾಲೂಕು ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾಗಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನಾನಾ ಸಂಘ- ಸಂಸ್ಥೆಗಳ ಮೂಲಕ ಸಾಮಾಜಿಕ ಸೇವೆಯೊಂದಿಗೆ ನೊಂದವರಿಗೆ ನೆರವು ನೀಡುತ್ತಾ ಬರುತ್ತಿದ್ದಾರೆ.
ಭೋವಿ ಸಮಾಜದ ಸಂಘಟನೆಯಲ್ಲೂ ಸಕ್ರಿಯರಾಗಿದ್ದು, ಕ್ರಿಯಾಶೀಲ ವ್ಯಕ್ತಿತ್ವ, ಸಂಘಟನಾ ಚತುರತೆ ಹೊಂದಿದವರಾಗಿದ್ದಾರೆ. ಸರಳ ಹಾಗೂ ಸ್ನೇಹ ಜೀವಿಯಾಗಿರುವ ವರಲಕ್ಷ್ಮಿ ಇವರು ಸಾಮಾಜಿಕ ಸೇವೆಯೊಂದಿಗೆ ಎಲ್ಲಾ ವರ್ಗದ ಜನರೊಂದಿಗೂ ಸುಲಭವಾಗಿ ಬೆರೆತು ಅವರ ಸಮಸ್ಯೆ, ಸಂಕಷ್ಟ, ನೋವು, ತೊಂದರೆಗಳಿಗೆ ಸ್ಪಂದಿಸುತ್ತಾ ಬರುತ್ತಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ:
ಪರಿಪೂರ್ಣ ಪ್ರತಿಷ್ಠಾನ ಫೌಂಡೇಷನ್, ಕರ್ನಾಟಕ ನೇತಾಜಿ ಚಾರಿಟಬಲ್ ಟ್ರಸ್ಟ್‌ನಿಂದ ಬೆಂಗಳೂರಿನಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರಿಂದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆಯಾಗಿದ್ದಾರೆ.
೨೦೧೧ರ ಜನಗಣತಿಯ ಪ್ರಕಾರ ರಾಜ್ಯದಲ್ಲಿರುವ ಪರಿಶಿ? ಜಾತಿ, ಪಂಗಡಗಳಲ್ಲಿ ಭೋವಿ ಸಮುದಾಯ ಮೂರನೇ ಸ್ಥಾನದಲ್ಲಿದೆ. ೧೯೮೦ರಲ್ಲಿ ಮಾಜಿ ಶಾಸಕರಾಗಿದ್ದ ಭೋವಿ ಸಮಾಜದ ಆರ್. ಪೀರಣ್ಣ ಅವರನ್ನು ಕಾಂಗ್ರೆಸ್ ಎಂಎಲ್‌ಸಿ ಮಾಡಿತ್ತು. ಅದಾದನಂತರ ಕಾಂಗ್ರೆಸ್ ಭೋವಿ ಸಮುದಾಯಕ್ಕೆ ಈ ಅವಕಾಶ ನೀಡದಿರುವುದು ಸಮುದಾಯದ ಬೇಸರಕ್ಕೆ ಕಾರಣವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭೋವಿ ಸಮುದಾಯಕ್ಕೆ ಅತಿ ಕಡಿಮೆ ಟಿಕೆಟ್‌ಗಳನ್ನು ನೀಡಲಾಗಿತ್ತು. ೧೯೮೫ರ ನಂತರ ಲೋಕಸಭಾ ಟಿಕೆಟ್ ಸಹ ನೀಡಿಲ್ಲ.
ಕರ್ನಾಟಕ ಕಾಂಗ್ರೆಸ್, ಭೋವಿ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡದಿರುವುದು ಹಾಗೂ ಪದೇ ಪದೇ ಕಡೆಗಣಿಸುತ್ತಿರುವುದು ಈ ಸಮುದಾಯದ ಜನರು ಮತ್ತು ನಾಯಕರಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ ಎಂಬ ವಿಚಾರವನ್ನು ಕರ್ನಾಟಕ ಕಾಂಗ್ರೆಸ್ ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕಿದೆ.
ಆದ್ದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರು, ಕಾಂಗ್ರೆಸ್‌ನ ಎಲ್ಲಾ ಹಿರಿಯ ನಾಯಕರು, ಭೋವಿ ಸಮಾಜದ ಸಚಿವ ಶಿವರಾಜ್ ತಂಗಡಗಿ, ಮಾಜಿ ಸಚಿವ ವೆಂಕಟರಮಣಪ್ಪ, ಸಮುದಾಯದ ಶಾಸಕರು, ಮಾಜಿ ಶಾಸಕರುಗಳು ವರಲಕ್ಷ್ಮಿ ಅವರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಬೇಕು. ಈ ಮೂಲಕ ಭೋವಿ ಸಮುದಾಯಕ್ಕೆ ಸಂಪೂರ್ಣ ಸಹಕಾರ ನೀಡಿ, ಈ ಬಾರಿ ವಿಧಾನ ಪರಿಷತ್‌ಗೆ ಅವಕಾಶ ನೀಡುತ್ತಾರೆಂಬುದು ಸಮುದಾಯದ ನಂಬಿಕೆಯಾಗಿದೆ ಎಂದು ಹನುಮಂತಪ್ಪ, ತಿರುಮಲೇಶ್ ಮತ್ತು ಪೂಜಾರಿ ಕೋಟಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.