ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ತಾಲ್ಲೂಕು ನವೀಲುಕಲ್ಲು ಭೋವಿಹಟ್ಟಿ ಗ್ರಾಮದ ನಿವಾಸಿ ಲಕ್ಷ್ಮಮ್ಮ ಗಂಡ ಹನುಮಂತಪ್ಪ (38) ಕಾಣೆಯಾದ ಕುರಿತು ಅಕ್ಟೋಬರ್ 2 ರಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷ್ಮಮ್ಮ 4.5 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ, ತೆಳ್ಳನೆಯ ಮೈಕಟ್ಟನ್ನು ಹೊಂದಿರುತ್ತಾರೆ. ಕುಳ್ಳನೆಯ ಮಹಿಳೆಯಾಗಿದ್ದು, ಹಲ್ಲುಗಳು ಹಿಂದೆ ಹಾಗೂ ಮುಂದೆ ಇರುತ್ತವೆ. ಕಾಣೆಯಾದ ಸಮಯದಲ್ಲಿ ಹಸಿರು ಸೀರೆ ಧರಿಸಿರುತ್ತಾರೆ. ಕನ್ನಡ ಮತ್ತು ತೆಲುಗು ಭಾಷೆಯನ್ನು ಮಾತನಾಡುತ್ತಾರೆ.
ಗುರುತು ಪತ್ತೆಯಾದವರು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08191277277, 9480803165, ಹೊಳಲ್ಕೆರೆ ವೃತ್ತ ನಿರೀಕ್ಷರ ಕಛೇರಿ 08191275376, 9480803135, ಪೊಲೀಸ್ ಉಪಾಧೀಕ್ಷಕರವರ ಕಛೇರಿ ಸಂಖ್ಯೆ 08194-222430, ಜಿಲ್ಲಾ ಕಂಟ್ರೋಲ್ ರೂಂ 08194-222782, 9480803100 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ.

