ತಹಶೀಲ್ದಾರ್ ಜೀಪ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೂಪ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ :
ಮಿನಿ ವಿಧಾನ ಸೌಧದ‌ ಮುಂದೆ ತನ್ನ ಬೈಕ್ ನ್ನು ತಾನೆ ಸುಟ್ಟುಕೊಂಡಿದ್ದ ಪೃಥ್ವಿರಾಜ್‌ ಈಗ ಚಳ್ಳಕೆರೆ ತಹಶೀಲ್ದಾರ್ ಜೀಪ್ ಗೆ ಬೆಂಕಿ ಹಚ್ಚಿರುವ ಘಟನೆ ಗುರುವಾರ ಜರುಗಿದೆ.

ಚಳ್ಳಕೆರೆ ನಗರದ ತಾಲೂಕು ಕಛೇರಿ ಮುಂದೆ ಎಂದಿನಂತೆ ತಹಶೀಲ್ದಾರ್ ಕರ್ತವ್ಯಕ್ಕೆ ಸರ್ಕಾರಿ ವಾಹನದಲ್ಲಿ ಬಂದು ತಾಲೂಕು ಕಛೇರಿ ಮುಂದೆ ನಿಲ್ಲಿಸಿ ಒಳಹೋಗಿದ್ದಾರೆ ಆದರೆ ತಹಶೀಲ್ದಾರ್ ಬಂದು ಒಳ ಹೋದ ಕೆಲವೇ ಕ್ಷಣಗಳಲ್ಲಿ ಏಕಾಏಕಿ ಆರೋಪಿ ಪೃಥ್ವಿರಾಜ್‌ ಸರ್ಕಾರಿ ವಾಹನದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಇನ್ನೂ ಬೆಂಕಿ ಹಚ್ಚಿದ ಕೆಲವೆ ಕ್ಷಣಗಳಲ್ಲಿ ಸಾರ್ವಜನಿಕರು ಸಿಬ್ಬಂದಿ ವರ್ಗ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾವುತ ತಪ್ಪಿಸಿದ್ದಾರೆ. ಆರೋಪಿ ಪೃಥ್ವಿರಾಜ್‌ ನನ್ನು ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";