ಮಾಧುರಿ ಗಿರೀಶ್ ಬಣಕ್ಕೆ ಭರ್ಜರಿ ಜಯ

News Desk

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಹೊಳಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳ ಸ್ಥಾನಕ್ಕೆ ಭಾನುವಾರ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ  ಎಸ್.ಆರ್.ಗಿರೀಶ್ ಮಾಧುರಿ ಗುಂಪು ಜಯಗಳಿಸಿರುವುದು ವಿರೋಧಿಗಳಿಗೆ ಹಿನ್ನೆಡೆಯಾಗಿದೆ.

ಸಾಲಗಾರರಲ್ಲದ ಕ್ಷೇತ್ರದಿಂದ ಎಸ್.ಆರ್.ಗಿರೀಶ್-೬೭೦, ಹೆಚ್.ಕುಬೇರಪ್ಪ-೪೭೧, ಎ.ಎನ್.ಮೌನೇಶ್-೪೬೬, ವೀರಭದ್ರಪ್ಪ ಯು.ಎಂ.-೪೪೬, ಜಿ.ಶಶಿಧರ-೪೮೧, ಮಹದೇವಪ್ಪ-೫೩೩ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಮಹಿಳಾ ಮೀಸಲು ಕ್ಷೇತ್ರದಿಂದ ಮಮತ-೫೨೬, ಸುಜಾತ ವಿ-೫೦೭ ಮತಗಳನ್ನು ಪಡೆದಿದ್ದಾರೆ. ಎಸ್.ಟಿ.ಮೀಸಲು ಕ್ಷೇತ್ರದಿಂದ ತಿಪ್ಪೇರುದ್ರಪ್ಪ ಡಿ-೪೭೪, ಎಸ್ಸಿ.ಮೀಸಲು ಕ್ಷೇತ್ರದಿಂದ ಮಹದೇವಪ್ಪ ಎಸ್-೫೩೩ ಮತಗಳನ್ನು ಗಿಟ್ಟಿಸಿಕೊಂಡು ಜಯಶಾಲಿಗಳಾಗಿದ್ದಾರೆ.

ಬಿ.ಸಿ.ಎಂ.ಬಿ. ಯಿಂದ ಯೋಗೇಶ್ ಹೆಚ್, ಬಿ.ಸಿ.ಎಂ.ಎ. ಯಿಂದ ಆರ್.ಕರಿಯಪ್ಪ, ಸಾಲಗಾರರಲ್ಲದ ಕ್ಷೇತ್ರದಿಂದ ಎಂ.ಬಸವರಾಜಪ್ಪ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಾಡಿಗ ವಿಶ್ವನಾಥ, ಜಿ.ಆರ್.ಪ್ರಭು, ರಾಜಪ್ಪ ಜೆ, ಲೋಹಿತ್ ಹೆಚ್. ಆರ್.ಸತೀಶ, ಎಸ್.ಪಿ.ಸತೀಶ, ನಾಗರಾಜ, ಬಿ.ಕರಿಯಪ್ಪ, ದೇವಿರಮ್ಮ, ವಸಂತಮ್ಮ ಇವರುಗಳು ಮಾಧುರಿ ಗಿರೀಶ್ ಗುಂಪಿನ ವಿರುದ್ದ ಸ್ಪರ್ಧಿಸಿ ಸೋತಿದ್ದಾರೆ. ಪ್ರತಿಷ್ಠಿತ ಚುನಾವಣೆಯಲ್ಲಿ ಒಟ್ಟು ೧೦೦೧ ಮತಗಳಿದ್ದು, ೯೩೦ ಮತಗಳು ಚಲಾವಣೆಯಾಗಿವೆ.

 

 

 

- Advertisement -  - Advertisement - 
Share This Article
error: Content is protected !!
";