ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಸಾಣೀಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲಮರಹಳ್ಳಿಯಿಂದ ಚಳ್ಳಕೆರೆ ಕಡೆಗೆ ಟಿವಿಎಸ್ ಎಕ್ಸಲ್‌ನಲ್ಲಿ ಆಗಮಿಸುತ್ತಿದ್ದ ತರಕಾರಿ ವ್ಯಾಪಾರಿ ವೀರಭದ್ರಪ್ಪ(೪೫) ಎಂಬುವವರಿಗೆ ಹಿರಿಯೂರು ಕಡೆಯಿಂದ ಚಳ್ಳಕೆರೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ವೀರಭದ್ರಪ್ಪನವರ ತಲೆಗೆಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ.
ಮೃತನ ಪತ್ನಿ ಚಿತ್ತಮ್ಮ ಪೊಲೀಸರಿಗೆ ದೂರು ನೀಡಿ, ನನ್ನ ಗಂಡ ಸಾವಿಗೆ ಕಾರಣರಾದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ಒತ್ತಾಯಿಸಿದ್ದಾರೆ. ಪಿಎಸ್‌ಐ ಜೆ.ಶಿವರಾಜ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.