ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕೋಶ ಮತ್ತು ಅಣು ತಂತ್ರಜ್ಞಾನ ಸಂಶೋಧನಾ, ಅಭಿವೃದ್ಧಿ ಕೇಂದ್ರ(C-CAMP)ದ ಸಹಕಾರದ ಸ್ಟಾರ್ಟ್‌ಅಪ್ ಆದ ಸೀ6 ಎನರ್ಜಿ( Sea6 Energy ), ಸಮುದ್ರ ಕಳೆ ಜೀವರಾಶಿಗಳಿಂದ ಜೈವಿಕ ಇಂಧನ ಮತ್ತು ರಾಸಾಯನಿಕಗಳನ್ನು ಅಭಿವೃದ್ಧಿಪಡಿಸಲು HPCL ಗ್ರೀನ್ R&D ಸೆಂಟರ್ ( HPGRDC) ಜೊತೆ ಮಹತ್ವದ ಒಪ್ಪಂದವನ್ನು (MoU) ಮಾಡಿಕೊಂಡಿದೆ.
ಭಾರತವು ಭಾರೀ ಪ್ರಮಾಣದ ಕಚ್ಚಾ ತೈಲವನ್ನು (80%) ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ ಪರಿಹಾರವಾಗಿ ಶಾಶ್ವತ ಮತ್ತು ಪರಿಸರ ಸ್ನೇಹಿ ಇಂಧನ ಮೂಲಗಳನ್ನು ಬಳಕೆ ಮಾಡಲು ಹೊಸ ಮಾರ್ಗಗಳನ್ನು ಹುಡುಕುವ ಅಗತ್ಯವಿದೆ.
ಸೀ6 ಎನರ್ಜಿ( Sea6 Energy )ಯ ಸುಧಾರಿತ ಸಮುದ್ರ ಕಳೆ ಕೃಷಿ ವಿಧಾನವು ಕೃಷಿ ಭೂಮಿಯನ್ನು ಬಳಸದೆಯೇ, ವ್ಯಾಪಕವಾಗಿ ವಿಸ್ತರಿಸಬಹುದಾದ ಮತ್ತು ಪರಿಸರ ಸ್ನೇಹಿ ಪರಿಹಾರವನ್ನು ಒದಗಿಸುತ್ತದೆ.
ಇದರಿಂದ ಪ್ರಕೃತಿಗೆ ಹಾನಿ ಮಾಡದ, ಮಾಲಿನ್ಯ ರಹಿತ ಇಂಧನದ ಹೊಸ ಪರಿಹಾರಗಳತ್ತ ಕೆಲಸ ಮಾಡುವ ಸ್ಟಾರ್ಟಪ್‌ಗಳಿಗೆ ಸರ್ಕಾರದಿಂದ ಸಿಗುವ ಬಲವಾದ ಬೆಂಬಲವನ್ನು ಎತ್ತಿ ತೋರಿಸುತ್ತದೆ. ಕರ್ನಾಟಕ ಸರ್ಕಾರವು ಸ್ಟಾರ್ಟ್‌ಅಪ್‌ಗಳಿಗೆ ಅವಶ್ಯಕವಾದ ಸಂಪನ್ಮೂಲಗಳನ್ನು,
ಮಾರ್ಗದರ್ಶನವನ್ನು ಮತ್ತು ಬೆಂಬಲವನ್ನು ಒದಗಿಸಿ, ಅವುಗಳ ಬೆಳವಣಿಗೆಯನ್ನು ಉತ್ತೇಜಿಸಿ, ಮತ್ತು ಅವುಗಳ ಸಾಮರ್ಥ್ಯವನ್ನು ಹೆಚ್ಚುಗೊಳಿಸಲು ಸಹಾಯ ಮಾಡುವ ದೃಢಸಂಕಲ್ಪ ಕೈಕೊಂಡಿದೆ. ಈ ರೀತಿಯ ಬೆಂಬಲವು ರಾಷ್ಟ್ರೀಯ ಆರ್ಥಿಕ ಬೆಳವಣಿಗೆಯನ್ನುಉತ್ತೇಜಿಸಲಿದೆ. ಇದು ಕರ್ನಾಟಕ ಸರ್ಕಾರದ ಶಾಶ್ವತ ಇಂಧನ ಬಳಕೆಗೆ ಮತ್ತು ಪರಿಸರ ಸಂರಕ್ಷಣೆಗೆ ಬದ್ಧತೆಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ತಿಳಿಸಿದೆ.