ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಶೀಘ್ರ ವಿಲೀನ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿಲೀನ ಆಗಬಹುದು. ಆದಷ್ಟು ಬೇಗ ಅವರು ವಿಲೀನವಾಗುವ ಸಾಧ್ಯತೆ ಇದೆ. ಎರಡು ಪಾರ್ಟಿ ಇದ್ದರೆ ರಾಜ್ಯಕ್ಕೆ ಒಳ್ಳೆಯದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲೆಕ್ಕಕ್ಕೆ 3 ಪಕ್ಷಗಳು ಆಟಕ್ಕೆ 2 ಪಾರ್ಟಿ ಅನ್ನೋ ಹಾಗಾಗಿದೆ. ಆದಷ್ಟು ಬೇಗ ಅವರು ವಿಲೀನವಾಗಲಿ. ಎರಡೇ ಪಾರ್ಟಿ ಇದ್ದರೆ ರಾಜಕಾರಣ‌ಮಾಡಬಹುದು. ನಾವು ಫೈಟ್ ಮಾಡೋಕೆ‌ಒಳ್ಳೆಯದಾಗುತ್ತೆ. ಎರಡು ಪಾರ್ಟಿ ಇದ್ದರೆ ರಾಜ್ಯಕ್ಕೂ ಒಳ್ಳೆಯದು ಎಂದು ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು ನಗರದಲ್ಲಿ ಚುನಾವಣೆ ಬರುತ್ತಿದೆ. ಅರ್ಜಿ ಹಾಕಲು ಅವಕಾಶ ನೀಡಿದ್ದೇವೆ.

- Advertisement - 

ಅದಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ. 779 ಜನ ಜಿಬಿಎ ಚುನಾವಣೆಗೆ ಅರ್ಜಿ ಹಾಕಿದ್ದಾರೆ. ಯಾರು ಅರ್ಜಿ ಹಾಕಿದ್ದೀರೋ ಈಗಲೇ ಕೆಲಸ ಮಾಡಿ. ನಾವೂ ಕೂಡ ಪರಾಮರ್ಶೆ ಮಾಡ್ತೇವೆ.‌ಸರಿಯಾದ ಅಭ್ಯರ್ಥಿಯನ್ನೇ ಹಾಕಬೇಕು‌. ಬೆಂಗಳೂರು ನಗರದಲ್ಲಿ ಕೆಲಸ ಆಗ್ತಿದೆ. ನಾವು ಉತ್ತಮವಾಗಿ ಕೆಲಸ ಮಾಡ್ತಿದ್ದೇವೆ. ನೇರವಾಗಿ ಫೈಟ್ ಮಾಡೋಕೆ ನಾವು ರೆಡಿ ಇದ್ದೇವೆ ಎಂದು ಡಿಸಿಎಂ ಅವರು ಹೇಳಿದರು.‌

ಪಕ್ಷದ ಕಾರ್ಯಕರ್ತರು ವರ್ಷ ಚುನಾವಣಾ ವರ್ಷ ಅಂತ ಭಾವಿಸಬೇಕು. ಈ ವರ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಚುನಾವಣೆ ಮಾಡೋದಕ್ಕೆ ನಾವು ರೆಡಿ ಇದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದರು.
ಪಟ್ಟಣ ಪಂಚಾಯಿತಿ
, ಪುರಸಭೆಗಳು ಮೇಲ್ದೆರ್ಜೆಗೇರಿಕೆ ಆಗ್ತಿದೆ. ಇದೇ ವರ್ಷ ಕೇಂದ್ರದ ಜನಗಣತಿ ಪ್ರಾರಂಭವಾಗ್ತಿದೆ. ನಾವು ಚುನಾವಣೆಗೆ ಸಿದ್ದತೆ ಮಾಡಿಕೊಳ್ತಿದ್ದೇವೆ ಎಂದು ತಿಳಿಸಿದರು.

- Advertisement - 

ಜೆಡಿಎಸ್ ಪಕ್ಷವು ರಾಜಕೀಯ ಪಕ್ಷದ ರೀತಿಯಲ್ಲಿ ಇಲ್ಲ. ಅದು ಪರ್ಸನಲ್ ಪ್ರಾಪರ್ಟಿ ಥರ ಇದೆ. ಆ ಪಕ್ಷಕ್ಕೆ ಒಂದು ಸಿದ್ದಾಂತ ಇಲ್ಲ. ಯಾವುದೇ ಐಡಿಯಾಲಜಿ‌ಇಲ್ಲ ಎಂದು ಡಿ.ಕೆ ಶಿವಕುಮಾರ್ ವಾಗ್ದಾಳಿ ಮಾಡಿದರು.

ಕಾಂಗ್ರೆಸ್ ಸೇರ್ಪಡೆ:
ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಗೋವಿಂದರಾಜ್
, ಅವರ ಪತ್ನಿ ಗೌರಮ್ಮ ಮತ್ತಿತರರು ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಆರ್​ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಅವರು ನ್ಯಾಯಾಲಯವು ಖುಲಾಸೆ ಮಾಡಿ ಆದೇಶಿಸಿತ್ತು.

 

 

 

Share This Article
error: Content is protected !!
";