ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನೆಲ್ಲೆಡೆ ತೀವ್ರ ಕುತೂಹಲ ಕೆರಳಿಸಿದ್ದ ಭಾಶೆಟ್ಟಿ ಹಳ್ಳಿ ಪ್ರಪ್ರಥಮ ಪಟ್ಟಣ ಪಂಚಾಯ್ತಿ ಚುನಾವಣೆ ನಡೆದು ಫಲಿತಾಂಶ ಹೊರ ಬಿದ್ದಿದೆ. ಪಟ್ಟಣ ಪಂಚಾಯ್ತಿಯ 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 14, ಕಾಂಗ್ರೆಸ್ 3, ಜೆಡಿಎಸ್ 1, ಪಕ್ಷೇತರ 1ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
ನಿರೀಕ್ಷೆಯಂತೆ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಪಟ್ಟಣ ಪಂಚಾಯ್ತಿ ತನ್ನದಾಗಿಸಿಕೊಂಡಿದೆ. ಹೆಚ್ಚು ಸ್ಥಾನಗಳ ನಿರೀಕ್ಷೆ ಇಟ್ಟುಕೊಂಡು ಚುನಾವಣೆಗಿಳಿದಿದ್ದ ಆಡಳಿತರೂಢ ಕಾಂಗ್ರೆಸ್ 3 ಸ್ಥಾನ ಗೆದ್ದು ಒಂದರ್ಥದಲ್ಲಿ ಮುಖ ಭಂಗ ಅನುಭವಿಸಿದೆ. ಇನ್ನು ಜೆಡಿಎಸ್ ತನ್ನೆಲ್ಲ ಪ್ರಮುಖ ನಾಯಕರೆಲ್ಲರೂ ಪಕ್ಷಾಂತರ ಗೊಂಡರೂ ಒಂದು ಸ್ಥಾನ ಗೆಲ್ಲುವ ಮೂಲಕ ತೃಪ್ತಿ ಪಟ್ಟುಕೊಂಡಿದೆ. ವಿಶೇಷವೆಂದರೆ ಪ್ರಮುಖ ರಾಜಕೀಯ ಪಕ್ಷಗಳ ಜಿದ್ದಾ ಜಿದ್ದಿನ ನಡುವೆ ಪಕ್ಷೇತರರೊಬ್ಬರು ಗೆದ್ದಿರುವುದು ಕುತೂಹಲವೆನಿಸಿದೆ.
ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಹಾಗೂ ಪಡೆದ ಮತಗಳ (ಆವರಣದಲ್ಲಿ )ವಿವರ
1ನೇ ವಾರ್ಡ್.. ಶ್ವೇತಾ ಮುರುಳಿದರ್, ಬಿಜೆಪಿ, (391)
2 ನೇ ವಾರ್ಡ್..ಎಸ್. ಪ್ರೇಮ್ ಕುಮಾರ್, ಬಿಜೆಪಿ (391)
3 ನೇ ವಾರ್ಡ್.. ವೇಣುಗೋಪಾಲ್, ಬಿಜೆಪಿ (166)
4 ನೇ ವಾರ್ಡ್..ಶ್ರೀನಿವಾಸ್ ರೆಡ್ಡಿ, ಪಕ್ಷೇತರ, (218)
5 ನೇ ವಾರ್ಡ್.. ರಾಮಮೂರ್ತಿ, ಬಿಜೆಪಿ (140)
6 ನೇ ವಾರ್ಡ್.. ಭಾಗ್ಯಮ್ಮ ಬಿಜೆಪಿ, (290)
7 ನೇ ವಾರ್ಡ್.. ಮಧು ಕುಮಾರ್, ಬಿಜೆಪಿ (220)
8 ನೇ ವಾರ್ಡ್.. ಮುನಿಶಂಕರ್, ಬಿಜೆಪಿ, (284)
9 ನೇ ವಾರ್ಡ್.. ಚಂದನ ಎನ್., ಜೆಡಿಎಸ್ (254)
10 ನೇ ವಾರ್ಡ್.. ಅರುಣ್ ಕುಮಾರ್,ಕಾಂಗ್ರೆಸ್, (374)
11 ನೇ ವಾರ್ಡ್.. ಬಿ. ಕೃಷ್ಣಪ್ಪ, ಬಿಜೆಪಿ, (295)
12 ನೇ ವಾರ್ಡ್.. ಸಿ. ನಾರಾಯಣ ಸ್ವಾಮಿ, ಬಿಜೆಪಿ (258)
13 ನೇ ವಾರ್ಡ್.. ಲೀಲಾ ಮಹೇಶ್, ಬಿಜೆಪಿ,(403)
14 ನೇ ವಾರ್ಡ್.. ಎಸ್. ಪ್ರೇಮ್ ಕುಮಾರ್, ಬಿಜೆಪಿ, (158)
15 ನೇ ವಾರ್ಡ್.. ಅಂಬುಜಾಕ್ಷಿ, ಬಿಜೆಪಿ, (253)
16 ನೇ ವಾರ್ಡ್.. ಪುಷ್ಪಾ ಎಲ್.,ಕಾಂಗ್ರೆಸ್, (382)
17 ನೇ ವಾರ್ಡ್.. ಕೆ. ನೇತ್ರಾ ಮಧು ಕುಮಾರ್, ಬಿಜೆಪಿ, (170)
18 ನೇ ವಾರ್ಡ್.. ರಾಧಾ ಮಣಿ, ಬಿಜೆಪಿ, (311)
19 ನೇ ವಾರ್ಡ್.. ದಾಕ್ಷಾಯಿಣಿ, ಕಾಂಗ್ರೆಸ್, (293)
ದೊಡ್ಡಬಳ್ಳಾಪುರ ನಗರ ಸಭೆಯ 21ನೇ ವಾರ್ಡ್ ಹೇಮಾವತಿ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಜೇತರಾಗಿದ್ದಾರೆ.
“ನಿರೀಕ್ಷೆಯಂತೆ ಭಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ 14 ಸ್ಥಾನಗಳನ್ನು ಗೆಲ್ಲುವ ಮೂಲಕ ಗದ್ದುಗೆ ಹಿಡಿದಿದೆ. ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿಯೇ ತೀರುತ್ತೇವೆಂದು ಪಣ ತೊಟ್ಟಿದ್ದ ನಾಯಕರೆನಿಸಿಕೊಂಡವರಿಗೆ ಮತದಾರರು ತಕ್ಕ ಶಾಸ್ತಿ ಮಾಡಿದ್ದಾರೆ. ಇದರ ಜೊತೆಗೆ ಗ್ಯಾರಂಟಿಗಳನ್ನು ನೆಚ್ಚಿಕೊಂಡು ಕಣಕ್ಕೆ ಇಳಿದಿದ್ದ ಕಾಂಗ್ರೆಸ್ ಅನ್ನು ಮತದಾರ ತಿರಸ್ಕರಿಸಿದ್ದಾನೆ.

ಇನ್ನು ಮುಂದೆ ಗ್ಯಾರಂಟಿಯೂ ಇಲ್ಲಾ, ವಾರಂಟಿ ಯೂ ಇಲ್ಲಾ. ಈ ಎಲ್ಲಾ ಗ್ಯಾರಂಟಿ ವಾರಂಟಿ ಗಳು ಇನ್ನು ಮನೆಕಡೆಗೆ ಹೋಗಲಿವೆ. ಮುಖ್ಯವಾಗಿ ಇಲ್ಲಿನ ಮತದಾರರು ನನ್ನ ಎರಡೂವರೆ ವರ್ಷದ ಸಾಧನೆಯನ್ನು ಮೆಚ್ಚಿದ್ದಾರೆ. ಅಪಪ್ರಚಾರಕ್ಕೆ ಮತದಾರರು ಮಣೆ ಹಾಕಿಲ್ಲ. ಭಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿ ಹಾಗೂ ನಗರಸಭೆಯ 21ನೇ ವಾರ್ಡ್ ಹೇಮಾವತಿ ಪೇಟೆ ವಾರ್ಡಿನಲ್ಲಿ ಬಿಜೆಪಿ ಗೆಲುವಿಗೆ ಆಶೀರ್ವದಿಸಿದ ಗೌರವಾನ್ವಿತ ಮತದಾರ ಬಂದುಗಳಿಗೆ ನಾನು ಅಭಾರಿ ಯಾಗಿದ್ದೇನೆ”.
ಧೀರಜ್ ಮುನಿರಾಜ್, ಶಾಸಕರು.
“ಭಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ 14 ಸ್ಥಾನಗಳನ್ನು ಗೆಲ್ಲುವ ಮೂಲಕ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ಚುನಾವಣೆಯಲ್ಲಿ ವಿರೋಧಿಗಳ ಅಪ ಪ್ರಚಾರದ ನಡುವೆಯೂ ಬಿಜೆಪಿ ಬಹುಮತ ಪಡೆದಿರುವುದು ತೀವ್ರ ಸಂತಸ ತಂದಿದೆ. ಮೇಲಾಗಿ ನಮ್ಮ ಜನಪ್ರಿಯ ಶಾಸಕರಾದ ಧೀರಜ್ ಮುನಿರಾಜ್ ರವರ ಜನಪರ ಕಾರ್ಯಗಳನ್ನು ಕ್ಷೇತ್ರದ ಮತದಾರರು ಮೆಚ್ಚಿದ್ದಾರೆ. ನಗರಸಭೆ ಹೇಮಾವತಿ ಪೇಟೆ ಉಪ ಚುನಾವಣೆಯಲ್ಲೂ ಸಹಾ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿ ಯನ್ನು ಬೆಂಬಲಿಸಿದ ಎಲ್ಲಾ ಮತದಾರ ಬಂದುಗಳಿಗೂ ಕೃತಜ್ಞತಾ ಪೂರ್ವಕ ವಂದನೆಗಳು”.
ಬಿ. ಮುದ್ದಪ್ಪ, ಬಿಜೆಪಿ ನಗರ ಅಧ್ಯಕ್ಷರು.

