ಯಶವಂತಪುರ ಶಾಸಕ ಸೋಮಶೇಖರ್ ಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೋಟಿಸ್ ಜಾರಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್ ಅವರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನೋಟೀಸ್ ನೀಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೆಚ್​ಐವಿ ಸೋಂಕಿನ ಚುಚ್ಚು ಮದ್ದನ್ನು ನೀಡಲು ಪ್ರಯತ್ನ ಮಾಡಿದವರಿಗೆ ಪಕ್ಷ ಯಾವುದೇ ನೋಟೀಸ್ ನೀಡಲ್ಲ, 120 ಕೋಟಿ ಅವ್ಯವಹಾರ ನಡೆದಿರುವುದನ್ನ ಪ್ರಸ್ತಾಪಿಸುವವರಿಗೆ ನೋಟೀಸ್ ಇಲ್ಲ,

ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುವವರು ಆರಾಮಾಗಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಪಕ್ಷದ ಶಿಸ್ತಿನ ಸಿಪಾಯಿಯಂತಿರುವ ತನಗೆ ನೋಟೀಸ್ ನೀಡುತ್ತಾರೆ ಎಂದು ಸೋಮಶೇಖರ್ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

 

Share This Article
error: Content is protected !!
";