ದೇವೇಗೌಡರನ್ನು ಅಭಿನಂದಿಸಿದ ಬಿಜೆಪಿ ನಿಯೋಗ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಮೆರಿಕಾ ಒಡ್ಡಿದ ಸುಂಕ ಸವಾಲನ್ನು ಮೆಟ್ಟಿ ನಿಲ್ಲಲು ಭಾರತ ಜಾಗತಿಕ ಮಟ್ಟದಲ್ಲಿ ಬಹುಪಕ್ಷೀಯ ಪಾಲುದಾರಿಕೆ ಹೊಂದುವ ನಿಟ್ಟಿನಲ್ಲಿ  ಪ್ರಧಾನಿ  ನರೇಂದ್ರ ಮೋದಿ ಅವರ ಪರ್ಯಾಯ ಮಾರ್ಗೋಪಾಯದ ರಾಜತಾಂತ್ರಿಕ ನೈಪುಣ್ಯತೆಯನ್ನು ಬೆಂಬಲಿಸಿದ ಮೇರು ರಾಜಕೀಯ ಮುತ್ಸದ್ಧಿತನ ಮೆರೆದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಭೇಟಿಮಾಡಿ ಬಿಜೆಪಿ ನಿಯೋಗವು ಅಭಿನಂದಿಸಿ ಆಶೀರ್ವಾದ ಪಡೆದರು.

ನಾಡಿನ ಹಾಗೂ ದೇಶದ ಅತ್ಯಂತ ಹಿರಿಯ ರಾಜಕೀಯ ನೇತಾರರಾಗಿ ದೇಶದ ಆಗುಹೋಗುಗಳ ಬಗ್ಗೆ ಸದಾ ಮಿಡಿಯುವ ಅವರು ಭಾರತ ಕಂಡ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ರಾಜನೀತಿ ಹಾಗೂ ಆಡಳಿತವನ್ನು ಮೆಚ್ಚಿ ಅವರ ಬೆಂಬಲಕ್ಕೆ ನಿಂತಿರುವುದು ನಿಜಕ್ಕೂ ಅವರ ಆದರ್ಶ ರಾಜಕಾರಣ ಹಾಗೂ ರಾಷ್ಟ್ರದ ಬಗೆಗಿನ ನೈಜ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ.

- Advertisement - 

ಗೌಡರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎಂದೂ ವಿರಮಿಸಲಿಲ್ಲ, ವಯಸ್ಸು, ಆರೋಗ್ಯವನ್ನು ಲೆಕ್ಕಿಸಲಿಲ್ಲ,ಸಮಸ್ಯೆಗಳು ಬಂದಾಗ ಬೆನ್ನು ಕೊಡಲಿಲ್ಲ, ಪರಿಶ್ರಮದ ಬೆವರು ಸಾರ್ಥಕಗೊಳ್ಳುವಂತೆ ನಾಡು ಹಾಗೂ ದೇಶದ ಹಿತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಜನ ಕಾಳಜಿಯ ಹೋರಾಟ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹೆಗಲು ಕೊಡುವ ನಿಟ್ಟಿನಲ್ಲಿ ಅವರ ಉತ್ಸಾಹದ ಚಿಲುಮೆ ಎಂದೂ ಕುಗ್ಗಲಿಲ್ಲ, ಏರಿಳಿತಗಳನ್ನು ಕಾಣಲಿಲ್ಲ, ಇದು ದೇವೇಗೌಡರ ವ್ಯಕ್ತಿತ್ವ ಹಾಗೂ ಅಗಾಧ ಶಕ್ತಿಯ ದ್ಯೋತಕವಾಗಿದೆ. 

ಶತಾಯುಷ್ಯದ ಹೊಸ್ತಿಲಲ್ಲಿದ್ದರೂ ಈ ಕ್ಷಣಕ್ಕೂ ಜನಕಲ್ಯಾಣ ಹಾಗೂ ದೇಶದ ಬೆಳವಣಿಗೆಗೆ ತಮ್ಮನ್ನು ತೊಡಗಿಸಿಕೊಂಡು ಜವಾಬ್ದಾರಿ ಪ್ರದರ್ಶಿಸುವ ಅವರು ನಮ್ಮಂತಹ ಯುವ ತಲೆಮಾರಿನ ರಾಜಕಾರಣಿಗಳಿಗೆ ನಿರಂತರ ಪ್ರೇರಣಾ ಶಕ್ತಿಯಾಗಿದ್ದಾರೆ ಹಾಗೂ ಮಾದರಿಯಾಗಿದ್ದಾರೆ.

- Advertisement - 

ಈ ನಿಟ್ಟಿನಲ್ಲಿ ಮಾನ್ಯ ದೇವೇಗೌಡರು ಶತಮಾನ ಪೂರೈಸಿ ನಮ್ಮೊಂದಿಗೆ ಇರಬೇಕು, ಮಾರ್ಗದರ್ಶನದ ಬೆಳಕಾಗಿ ಅವರು ಮಿನುಗಬೇಕು,ಕರುನಾಡು ಹಾಗೂ ಭಾರತದ ಬೆಳವಣಿಗೆಯಲ್ಲಿ ಅವರು ಮಹಾ ವೃಕ್ಷದಂತೆ ನೆರಳಾಗಿ ನಿಲ್ಲಬೇಕು ಎನ್ನುವುದು ಕನ್ನಡನಾಡಿನ ಕೋಟಿ, ಕೋಟಿ ಜನರ ಅಭಿಲಾಷೆಯಾಗಿದೆ, ಹಾರೈಕೆಯಾಗಿದೆ, ಪ್ರಾರ್ಥನೆಯಾಗಿದೆ ಎಂದು ನಿಯೋಗ ಅಭಿಪ್ರಾಯಪಟ್ಟಿದೆ.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಶಾಸಕರಾದ ಎಂ.ಕೃಷ್ಣಪ್ಪ, ಸುರೇಶ್ ಗೌಡ, ಸಿ.ಕೆ.ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ, ರಾಜ್ಯ ಕಾರ್ಯದರ್ಶಿ ಶರಣು ತಳ್ಳೀಕೆರೆ, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

 

 

Share This Article
error: Content is protected !!
";