ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶ್ರೀಮಂತರ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುವ ಬಿಜೆಪಿಗೆ ಬಡವರು ಅನುಭವಿಸುತ್ತಿರುವ ನೋವು, ನಿರಾಸೆ, ಹತಾಶೆಗಳು ಎಂದೂ ಅರ್ಥವಾಗುವುದಿಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮಾಡಿದೆ.
ಭಾರತ್ ಜೋಡೊ ಹಾಗೂ ಪ್ರಜಾಧ್ವನಿ ಯಾತ್ರೆಯಲ್ಲಿ ಸಾರ್ವಜನಿಕರು ಹೇಳಿಕೊಂಡ ಸಂಕಷ್ಟಗಳನ್ನು ಅರಿತು ಕಾಂಗ್ರೆಸ್ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳನ್ನು ನೀಡಲಾಯಿತು. ಇಂತಹ ಜನಪರ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಕರೆದು ಅಪಹಾಸ್ಯ ಮಾಡಿ ಟೀಕಿಸಿದರು.
“ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ” ಎಂಬ ಸಿದ್ದಾಂತದಲ್ಲಿ ವಿಶ್ವಾಸವಿರುವ ನಮ್ಮ ಸರ್ಕಾರ, ಬಡವರಿಗೆ ಆರ್ಥಿಕ ಚೈತನ್ಯ ತುಂಬುವ ಕೆಲಸವನ್ನು ಎಂದೂ ನಿಲ್ಲಿಸುವುದಿಲ್ಲ.
ಗೃಹ ಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದ ಇಂತಹ ಅದೆಷ್ಟೋ ಕುಟುಂಬಗಳ ಹಾರೈಕೆ ನಮ್ಮ ಸರ್ಕಾರದ ಮೇಲಿದೆ. ಅವರಿಗಾಗಿ ಕೆಲಸ ಮಾಡಿದ ಸಂತೃಪ್ತಿ ನಮಗಿದೆ ಎಂದು ಕಾಂಗ್ರೆಸ್ ಹೇಳಿದೆ.