ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಭಾರತೀಯ ಜನತಾ ಪಾರ್ಟಿ ಗಾಂಧೀಜಿ, ನೆಹರೂನೇ ಬಿಟ್ಟಿಲ್ಲ.. ಇನ್ನು ಸೋನಿಯಾ ಗಾಂಧಿ ಅವರನ್ನು ಬಿಡುತ್ತಾರಾ? ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಹರಿಹಾಯ್ದಿದೆ.
10 ವರ್ಷಗಳ ಹಿಂದೆ, ಸೋನಿಯಾಗಾಂಧಿ ಪ್ರಪಂಚದಲ್ಲೇ ಶ್ರೀಮಂತ ಮಹಿಳೆ ಅಂತ ಬೊಗಳೆ ಬಿಡುತ್ತಿದ್ದ ಬಿಜೆಪಿ, ಈಗ ಸೋನಿಯಾ ಗಾಂಧಿ ಅವರಿಗೆ ಯಾರೋ ಸೊರೋಸ್ ಅನ್ನುವವರು ಹಣ ಕೊಡುತ್ತಿದ್ದಾರೆ ಅಂತ ಸುಳ್ಳು ಆಪಾದನೆ ಮಾಡುತ್ತಿದೆ.
ಇವರದೇ ಸರ್ಕಾರ ಇದೆ. ಪ್ರಪಂಚದಲ್ಲೇ ಅತ್ಯುತ್ತಮವಾದ RAW ಇದೆ. ಅವರೇನು ಮೋದಿ ಮಂತ್ರ ಜಪಿಸುತ್ತ ಕುಳಿತಿರುವರಾ? ಮೋದಿ ತನ್ನ ಆಪ್ತ ಅದಾನಿಯ ಕಳ್ಳ ಕಹಾನಿಯನ್ನು ಮುಚ್ಚಿಹಾಕಲು ಕಾಂಗ್ರೆಸ್ ವಿರುದ್ಧ ಸೊರೋಸ್ ಅಸ್ತ್ರ ಪ್ರಯೋಗಿಸುವ ಷಡ್ಯಂತ್ರ ರೂಪಿಸುತ್ತಿದ್ದಾರೆ ಅಷ್ಟೇ.
ಈಗಾಗಲೇ ಅದಾನಿ ಬುಡಕ್ಕೆ ಬೆಂಕಿ ಬಿದ್ದಾಗಿದೆ, ನರೇಂದ್ರ ಮೋದಿ ಎಷ್ಟೇ ಬೊಬ್ಬೆ ಹೊಡೆದರೂ, ಅಮೇರಿಕಾದಲ್ಲಿ ಸಾಕ್ಷಿ ಸಮೇತ ಕೋರ್ಟಿನಲ್ಲಿ ಸಲ್ಲಿಸಿರುವ ಚಾರ್ಜ್ ಶೀಟ್ ನೋಡಿದರೆ ಈ ಬಾರಿ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ! ಎಂದು ಕಾಂಗ್ರೆಸ್ ಎಚ್ಚರಿಸಿದೆ.