ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಸವೇಶ್ವರರ ಕರ್ಮ ಭೂಮಿ ಬೀದರ್‌ನಿಂದ ವಕ್ಫ್‌ಬೋರ್ಡ್‌ಮತ್ತು ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಣ ಕಹಳೆ ಮೊಳಗಿಸಲಿದೆ ಎಂದು ಬಿಜೆಪಿ ತಿಳಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ನಮ್ಮ ಭೂಮಿ ನಮ್ಮ ಹಕ್ಕು ಹೋರಾಟಕ್ಕೆ ಬುಧವಾರ ಚಾಲನೆ ನೀಡಲಿದ್ದಾರೆ. ಇದೇ ವೇಳೆ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಚಾಮರಾಜನಗರದಿಂದ ಹಾಗೂ ಪರಿಷತ್‌ವಿಪಕ್ಷ ನಾಯಕರಾದ ಚಲವಾದಿ ನಾರಾಯಣಸ್ವಾಮಿ ಅವರು ರಾಮನಗರದಿಂದ ಹೋರಾಟಕ್ಕೆ ಧುಮುಕಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಬಿಜೆಪಿಯ ಈ ಹೋರಾಟಕ್ಕೆ ನಾಯಕರು, ಅಪಾರ ಸಂಖ್ಯೆಯ ಕಾರ್ಯಕರ್ತರು, ಮಠಾಧೀಶರು, ಜನಸಾಮಾನ್ಯರು ಬೆಂಬಲ ನೀಡಲಿದ್ದಾರೆ. ವಕ್ಫ್‌ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಲು ಸಿದ್ಧರಾಗಿ ಎಂದು ಬಿಜೆಪಿ ಕರೆ ನೀಡಿದೆ.