ಬಜೆಟ್ ಅಧಿವೇಶನದಲ್ಲಿ ಆಡಳಿತ ರೂಢ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾದ ಬಿಜೆಪಿ ನಾಯಕರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸೌಧದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಕಚೇರಿಯಲ್ಲಿ ಮುಂಬರುವ ಬಜೆಟ್ ಅಧಿವೇಶನ ಕುರಿತು ಮಹತ್ವದ ಚರ್ಚೆ ನಡೆಯಿತು.
ಸದನದಲ್ಲಿ ಪ್ರಶ್ನೆಗಳನ್ನು ಕೇಳುವುದು
, ಚರ್ಚೆಗೆ ಒಳಪಡಿಸುವ ವಿಷಯಗಳು ಹಾಗೂ ನಿಲುವಳಿ ಸೂಚನೆಯ ಮಂಡನೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಲಾಯಿತು.

ರಾಜ್ಯ ಸರ್ಕಾರದ ಭ್ರಷ್ಟಾಚಾರ, ವೈಫಲ್ಯ, ಜನವಿರೋಧಿ ನೀತಿಗಳನ್ನು ಬಹಿರಂಗಪಡಿಸಲು ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಸದನದಲ್ಲಿ ಬಲವಾದ ಪ್ರತಿಪಕ್ಷದ ಹೋರಾಟ ನಡೆಯಲಿದೆ.

ಈ ಕುರಿತು ಸರ್ವ ಸದಸ್ಯರು ತೀವ್ರ ಚರ್ಚೆ ನಡೆಸಿ, ಸರ್ಕಾರದ ಅಸಮರ್ಥತೆ ವಿರುದ್ಧ ರಾಜ್ಯದ ಜನತೆಗಾಗಿ ಪ್ರಭಾವೀ ನಿಲುವು ಕೈಗೊಳ್ಳಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ, ಎನ್.ರವಿಕುಮಾರ್, ಎಸ್.ವಿ. ಸಂಕನೂರ, ಕೆ.ಎಸ್.ನವೀನ್, ಡಿ.ಎಸ್ ಅರುಣ್, ವೈ.ಎಂ. ಸತೀಶ್, ಹೇಮಲತಾ ನಾಯಕ್, ಗೋಪಿನಾಥ್ ರೆಡ್ಡಿ, ಕೇಶವ್ ಪ್ರಸಾದ್ ಮತ್ತು ಶಾಂತಾರಾಮ್ ಸಿದ್ದಿ ಅವರು ಉಪಸ್ಥಿತರಿದ್ದರು.

Share This Article
error: Content is protected !!
";