ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ಉಜ್ಜಿನ ಮಠದ ಬೀದಿಯ ಮಾಜಿ ನಗರಸಭಾ ಸದಸ್ಯೆ ಹಾಗೂ ಬಿಜೆಪಿ ಮುಖಂಡರಾದ ಚಂದ್ರಮ್ಮ ಕೆ.ಎಸ್(76) ಬೆಂಗಳೂರಿನ ರಿ ಹ್ಯಾಬಿಲಿಟೆಷನ್ ಸೆಂಟರ್ ನಲ್ಲಿ ಬುಧವಾರ ಮೃತಪಟ್ಟಿದ್ದಾರೆ.
ಮೃತರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಕೆಂಗೇರಿ ಸಮೀಪದ ರುದ್ರಭೂಮಿಯಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಾಜಿ ಪ್ರಧಾನಮಂತ್ರಿ ದಿವಾಂಗತ ವಾಜಪೇಯವರು ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದಾಗ ಬಿ.ಜೆ.ಪಿಯ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿ ಕೆ.ಎಸ್ ಚಂದ್ರಮ್ಮ ಆಯ್ಕೆಯಾಗಿದ್ದರು. ಚಿತ್ರದುರ್ಗ ನಗರದ 5ನೇ ವಾರ್ಡ್ ನ ಸದಸ್ಯರಾಗಿ ಹಿಂದೂಪರ ಹೋರಾಟಗಾರಾಗಿ, ವಕೀಲರಾಗಿ ಜನಾನುರಾಗಿಯಾಗಿದ್ದರು.
ಇವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ವಕೀಲರಾದ ಪಿ. ಲೀಲಾಧರ ಠಾಕೂರ್, ಸಂಘ ಸಂಸ್ಥೆಗಳ ನೋದಣಿ ಸಮಾಲೋಕ ಲೋಕೇಶಪ್ಪ ಸೇರಿದಂತೆ ಮತ್ತಿತರರು ದೇವರಲ್ಲಿ ಪ್ರಾರ್ಥಿಸಿದ್ದಾರೆ.

