ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣಾ ಸುಧಾರಣೆಗಳ ಕುರಿತಂತೆ, ನಮ್ಮ ಹಿರಿಯ ನಾಯಕರು, ಆದರಣೀಯ ಗೃಹ ಸಚಿವರಾದ ಅಮಿತ್ ಶಾ ರವರು ಸಂಸತ್ತಿನಲ್ಲಿ ಮಾಡಿದ ಅಮೋಘ, ಪ್ರಭಾವಶಾಲಿ ಭಾಷಣವನ್ನು ಪಕ್ಷದ ಸಹೋದ್ಯೋಗಿಗಳೊಂದಿಗೆ ಶುಕ್ರವಾರ ಮತ್ತೊಮ್ಮೆ ವೀಕ್ಷಿಸಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
ನಮ್ಮ ಶ್ರೇಷ್ಠ ಸಂವಿಧಾನದ ಘನತೆ, ಐತಿಹಾಸಿಕ ಸಂಗತಿಗಳು ಮತ್ತು ಕಾನೂನಿನ ಸ್ಪಷ್ಟತೆಯೊಂದಿಗೆ, ವಿರೋಧ ಪಕ್ಷದ ಸುಳ್ಳು ನಿರೂಪಣೆಗಳನ್ನು ಅವರು ಪರಿಣಾಮಕಾರಿಯಾಗಿ ಬಯಲು ಮಾಡಿದ ರೀತಿ ನಿಜಕ್ಕೂ ಮನನೀಯವಾದದ್ದು. ಚುನಾವಣಾ ಆಯೋಗ ನಡೆಸಿರುವಂತಹ ಕಾನೂನುಬದ್ಧ ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಸಮಗ್ರತೆಗೆ ಏಕೆ ಅವಶ್ಯಕವಾಗಿದೆ ಎನ್ನುವುದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಈ ಭಾಷಣವನ್ನು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಕೂಡ ಮತ್ತೆ ಮತ್ತೆ ಕೇಳಬೇಕು.
ಮಾನ್ಯ ಅಮಿತ್ ಶಾ ಜೀ ರವರು ಸಂಸತ್ತಿನಲ್ಲಿ ತಮ್ಮ ದೃಢವಾದ, ಸತ್ಯವಾದ ಮಂಡನೆಗಳಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಸಾಂವಿಧಾನಿಕ ಸಂಸ್ಥೆಗಳನ್ನು ಎತ್ತಿಹಿಡಿದು, ಮುಕ್ತ, ನ್ಯಾಯಯುತ ಮತ್ತು ಪಾರದರ್ಶಕ ಚುನಾವಣೆಗಳಿಗೆ ಕೇಂದ್ರ ಸರ್ಕಾರದ ಅಚಲ ಬದ್ಧತೆಯನ್ನು ಸುಸ್ಪಷ್ಟವಾಗಿ ಸಾರಿದ್ದಾರೆ ಎಂದು ಅವರು ತಿಳಿಸಿದರು.

