ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಂಬುಲೆನ್ಸ್ ದುರ್ಬಳಕೆ ಮಾಡಿಕೊಂಡು ಅಟ್ಟಹಾಸ ಮೆರೆದ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಬೆಂಬಲಿಗರ ವರ್ತನೆ ಯಥಾ ರಾಜತಥಾ ಪ್ರಜಾ ಎನ್ನುವ ಮಾತನ್ನು ಮತ್ತೆ ನೆನಪು ಮಾಡುವಂತಿದೆ ಎಂದು ಸಿಟಿ ರವಿ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ಮಾಡಿದೆ.
ಚಿಂತಕರ ಚಾವಡಿ ಪರಿಷತ್ತಿನ ಕಲಾಪದಲ್ಲಿ ಸಹೋದ್ಯೋಗಿಯನ್ನು ಅಶ್ಲೀಲವಾಗಿ ನಿಂದಿಸಿದ್ದ ಸಿ.ಟಿ ರವಿಯನ್ನು ಕರ್ನಾಟಕದ ಬಿಜೆಪಿ ನಾಯಕರು, ಕಾರ್ಯಕರ್ತರು ಸಮರ್ಥಿಸಿಕೊಂಡು ಹೂ ಮಳೆ ಸುರಿಸಿ, ಜೀವ ಉಳಿಸುವ ಅಂಬ್ಯುಲೆನ್ಸ್ ದುರ್ಬಳಕೆ ಮಾಡಿಕೊಂಡು ಸ್ವಾಗತಿಸಿದ್ದು ಅವರ ಮಾನಸಿಕ ಅಸ್ವಸ್ಥತೆಯ ಪ್ರತಿಬಿಂಬ! ಎಂದು ಕಾಂಗ್ರೆಸ್ ಟೀಕಿಸಿದೆ.