ಸರ್ಕಾರದ ಸಾಧನಾ ಸಮಾವೇಶದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ಣಗೊಳ್ಳಲಿದ್ದು ಅದರ ಅಂಗವಾಗಿ ಸಾಧನಾ ಸಮಾವೇಶವನ್ನು ಸರ್ಕಾರ ಹಮ್ಮಿಕೊಂಡಿದ್ದು ಇದರ ವಿರುದ್ಧ ಬಿಜೆಪಿ ಪೋಸ್ಟರ್ ಬಿಡುಗಡೆ ಮಾಡಿದೆ. ದುಬಾರಿ ಜೀವನ – ಅಭಿವೃದ್ಧಿ ಶೂನ್ಯ. ಇದುವೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಪೋಸ್ಟರ್​ನಲ್ಲಿ ಬಿಜೆಪಿ ಟೀಕಿಸಿದೆ.

ಹಾಲಿನ ದರ 9 ರೂ. ಹೆಚ್ಚಳ ಮಾಡಲಾಗಿದೆ. ಮದ್ಯ ದರ ನಿರಂತರ ಏರಿಕೆ, ನೋಂದಣಿ ಶುಲ್ಕ ಏರಿಕೆ, ದಿನಬಳಕೆ ವಸ್ತುಗಳ ನಿರಂತರ ಬೆಲೆಯೇರಿಕೆ, ಪೆಟ್ರೋಲ್, ಡೀಸೆಲ್ ಮೇಲಿನ ರಾಜ್ಯದ ಸುಂಕ ಹೆಚ್ಚಳ ಮಾಡಲಾಗಿದೆ. ಬಸ್ – ಮೆಟ್ರೋ ಪ್ರಯಾಣ ದರ ಹೆಚ್ಚಳ.

ಬಿತ್ತನೆ ಬೀಜ, ಟಿಸಿ ಸಂಪರ್ಕ ಬಲು ದುಬಾರಿಯಾಗಿದೆ.ಮುಡಾ – ವಾಲ್ಮೀಕಿ ನಿಗಮ ಕಾರ್ಮಿಕ ಇಲಾಖೆ ಹಗರಣ. ಎಸ್.ಸಿ. ಎಸ್.ಪಿ.ಟಿ. ಎಸ್.ಪಿ ಹಣ ದುರ್ಬಳಕೆ, ಮುಸ್ಲಿಮರಿಗೆ ಶೇ.4% ಮೀಸಲಾತಿ. ಅಭಿವೃದ್ಧಿಗಿಲ್ಲ ಅನುದಾನ. ಕರ್ನಾಟಕದಿಂದ ಪ್ರಮುಖ ಕೈಗಾರಿಕೆಗಳ ವಲಸೆ, ಹಣದುಬ್ಬರ ಏರಿಕೆಯಾಗಿದೆ. ಕರ್ನಾಟಕ ಲೂಟಿ – ಕಾಂಗ್ರೆಸ್ ಡ್ಯೂಟಿ ಎಂದು ಬಿಜೆಪಿ ಪೋಸ್ಟರ್​ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.

 

- Advertisement - 
Share This Article
error: Content is protected !!
";