ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ಮುಖಂಡ, ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ದಿಢೀರ್ ಭೇಟಿ ಮಾಡಿ ಅಚ್ಚರಿ ಪಡುವಂತೆ ಮಾಡಿದ್ದಾರೆ.
ಬಿಜೆಪಿಯ ಪ್ರಭಾವಿ ಮತ್ತು ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕ. ನಿರಾಣಿ ಶುಕ್ರವಾರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ದಿಢೀರ್ ಆಗಮಿಸಿ ಭೇಟಿ ನೀಡಿದ್ದು ಕನ್ನಡಿಗರಲ್ಲಿ ಸೋಜಿಗ ಮೂಡಿಸಿದೆ.
ಒಂದು ಬೃಹತ್ ಗಾತ್ರದ ಹೂಗುಚ್ಚ ಮತ್ತು ಕೆಲವು ಪುಸ್ತಕಗಳೊಂದಿಗೆ ಅವರು ಶಿವಕುಮಾರ್ ಮನೆ ಪ್ರವೇಶಿಸಿದರು. ಡಿಸಿಎಂ ಜೊತೆ ಮಾತುಕತೆ ನಡೆಸಿದ್ದಾರೆ.