ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿಯ ದ್ವೇಷದ ರಾಜಕೀಯ ಮೌಂಟ್ ಎವೆರೆಸ್ಟ್ ಎತ್ತರಕ್ಕೆ ಏರಿದೆ ಎಂದು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಆರೋಪಿಸಿದೆ.
ರಾಜ್ಯಪಾಲರನ್ನು ಮುಂದೆ ಬಿಟ್ಟಾಯ್ತು, ಸಿಬಿಐಗೆ ಅವಕಾಶ ಇಲ್ಲದಾಯ್ತು, ಈಗ ED ಮುಂದೆ ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮುಡಾ ಪ್ರಕರಣದಲ್ಲಿ ಅಕ್ರಮ ಹಣದ ಪ್ರಕರಣಗಳನ್ನು ತನಿಖೆ ಮಾಡುವ EDಗೇನು ಕೆಲಸ? ಮುಡಾ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿಲ್ಲ,
ನಿವೇಶನಗಳನ್ನು ಖರೀದಿ ಮಾಡಿದ್ದಲ್ಲ, ಯಾವುದೇ ಹಣಕಾಸು ವ್ಯವಹಾರ ನಡೆದಿಲ್ಲ, ಹೀಗಿರುವಾಗ ED ಏಡಿ ಹಿಡಿಯಲು ಬರುತ್ತದೆಯೇ!? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಮೇಜ್ ನ್ನು ಘಾಸಿಗೊಳಿಸುವ ಹಾಗೂ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.