ಮನೆಗೊಂದು ಗ್ರಂಥಾಲಯ ಅಭಿಯಾನ ಓದುವ ಸಂಸ್ಕೃತಿಯ ಪ್ರತೀಕ-ಬಿ. ಎಲ್. ರಾಮಕೃಷ್ಣ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿರುವ ಮನೆಗೊಂದು ಗ್ರಂಥಾಲಯ ಅಭಿಯಾನವು ಸಮಾಜದಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಮಹತ್ವದ ಹೆಜ್ಜೆಯಾಗಿದೆ ಎಂದು ನಿವೃತ್ತ ಶಿಕ್ಷಕ ಬಿ.ಎಲ್.ರಾಮಕೃಷ್ಣ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಬೆಂ.ಗ್ರಾ.ಜಿಲ್ಲಾ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ನಗರದ ನಿವೃತ್ತ ಶಿಕ್ಷಕರಾದ ವಿ.ವಿಮಲಮ್ಮ ಬಿ.ಎಲ್.ರಾಮಕೃಷ್ಣ ದಂಪತಿಗಳ ಮನೆಯಲ್ಲಿ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

- Advertisement - 

ಒಂದು ಮನೆಯಲ್ಲಿರುವ ಗ್ರಂಥಾಲಯವು ಕೇವಲ ಪುಸ್ತಕಗಳ ಸಂಗ್ರಹವಾಗಿರುವ ಸ್ಥಳವಲ್ಲ. ಅದು ಜ್ಞಾನ, ಸಂಸ್ಕೃತಿ ಮತ್ತು ಉತ್ತಮ ಚಿಂತನೆಗಳನ್ನು ಬೆಳಗಿಸುವ ಜ್ಞಾನದ ದೀಪವಾಗಿದೆಎಂದರು.

ವಿದ್ಯಾನಿಧಿ ಕಾಲೇಜ್ ಉಪನ್ಯಾಸಕ ಗಿರೀಶ್ ಮಾತನಾಡಿ, ‘ಕನ್ನಡ ಸಾಹಿತ್ಯವು ಅಪಾರ ಸಂಪತ್ತಾಗಿದೆ. ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ ಮುಂತಾದ ಮಹನೀಯರ ಕೃತಿಗಳು ನಮ್ಮ ಬದುಕಿಗೆ ದಾರಿದೀಪಗಳಾಗಿವೆ. ಇಂತಹ ಅಮೂಲ್ಯ ಸಾಹಿತ್ಯ ಮನೆಮನೆಗೂ ತಲುಪುವ ಉದ್ದೇಶ ದಿಂದ ಮನೆಗೊಂದು ಗ್ರಂಥಾಲಯ ಅಭಿಯಾನವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಅವರು ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ನೇಮಕ ಮಾಡಿದ್ದಾರೆಎಂದು ಹೇಳಿದರು.

- Advertisement - 

ಪ್ರತಿ ಮನೆಯಲ್ಲಿ ಒಂದು ಚಿಕ್ಕ ಗ್ರಂಥಾಲಯ ಸ್ಥಾಪಿಸುವ ಮೂಲಕ ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸಬೇಕು. ಪುಸ್ತಕಗಳನ್ನು ಉಡುಗೊರೆ ಯಾಗಿ ನೀಡುವ ಸಂಪ್ರದಾಯವನ್ನು ಉತ್ತೇಜಿಸುವುದು ಅಗತ್ಯವಾಗಿದೆಎಂದು ತಿಳಿಸಿದರು.

ನಗರಸಭೆಯ ಸ್ಥಾಯಿ ಸಮಿತಿಯ ನಿಕಟ.ಪೂರ್ವ ಅಧ್ಯಕ್ಷ ವಿ.ಎಸ್.ರವಿಕುಮಾರ್ ಹಾಗೂ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿಯ ಜಿಲ್ಲಾ ಸದಸ್ಯ ರಬ್ಬನಹಳ್ಳಿ ಕೆಂಪಣ್ಣ, ಸಮಿತಿ ಜಿಲ್ಲಾ ಸದಸ್ಯೆ ಪ್ರಮೀಳಾ ಮಹಾದೇವ ಮಾತನಾಡಿದರು.

ಈ ಸಂದರ್ಭದಲ್ಲಿ   ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ : ಕರಿಯಪ್ಪನವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ನಾಮಿನಿ ಸದಸ್ಯ ಕಾಂತರಾಜ್,ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸಂಚಾಲಕ ಗಂಗರಾಜ ಶಿರವಾರ, ಸದಸ್ಯೆ ಗೌಹ‌ರ್ ಜಾನ್ ನೆಲಮಂಗಲ, ಸಿರಿ ಸಮೃದ್ಧಿ ಟ್ರಸ್ಟ್ ಕಾರ್ಯದರ್ಶಿ ಮುನಿರತ್ನ, ಮಂಜುನಾಥ್, ಕಲಾವಿದ ರಾಮಕೃಷ್ಣ  ಮುಂತಾದವರು ಹಾಜರಿದ್ದರು.

Share This Article
error: Content is protected !!
";