ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡ್ರಗ್ಸ್ ಪ್ರಕರಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದರ್ ! ಸಚಿವ ಪ್ರಿಯಾಂಕ್ ಖರ್ಗೆ ಅವರ ಅತ್ಯಾಪ್ತ ಮತ್ತು ಕಲ್ಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಎಂಬಾತ ಅಕ್ರಮ ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಬಂಧನವಾಗಿದ್ದಾನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
ಸಚಿವರ ಆಪ್ತ, ಜಿಲ್ಲಾಧ್ಯಕ್ಷ ಹಂತದ ಕಾಂಗ್ರೆಸ್ ನಾಯಕನೊಬ್ಬ ಈ ರೀತಿ ಡ್ರಗ್ಸ್ ಚಟುವಟಿಕೆಯಲ್ಲಿ ಬಂಧನವಾಗಿರುವುದು ಕರ್ನಾಟಕ ಕಾಂಗ್ರೆಸ್ ಪಕ್ಷದ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ.
ಡ್ರಗ್ ಮುಕ್ತ ಕಲ್ಬುರ್ಗಿ ನಿರ್ಮಿಸುತ್ತೇವೆ ಎಂದು ಮೀಡಿಯಾ ಸ್ಟೇಟ್‌ಮೆಂಟ್ ನೀಡುವ ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಬಗಲಿನಲ್ಲೇ ಡ್ರಗ್ಸ್ ಡೀಲ್ ಮಾಡುವವರನ್ನು ಇರಿಸಿಕೊಂಡು ಓಡಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.