ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿ ಮಹಿಳಾ ಕಾಂಗ್ರೇಸ್ ಮತ್ತು ಸುಶ್ರುತ ಸ್ವಯಂ ರಕ್ತದಾನ ಕೇಂದ್ರ ಬೆಂಗಳೂರು ಇವರ ಸಹಯೋಗದೊಂದಿಗೆ ಹಾಡೋನಹಳ್ಳಿ ಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.
ತೂಬಗೆರೆ ಹೋಬಳಿ ನಿಕಟ ಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ ನವರ ಅದ್ಯಕ್ಷತೆಯಲ್ಲಿ ನಡೆದ ರಕ್ತದಾನ ಶಿಬಿರ ನಡೆಯಿತು.
ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ರವಿ ಮಾವಿನ ಕುಂಟೆ ಉದ್ಘಾಟಿಸಿ ಮಾತನಾಡಿ ರಕ್ತ ದಾನ ಮಹಾದಾನ ದೇಶದಲ್ಲಿ ಈಗಿನ ವ್ಯವಸ್ಥೆಯಲ್ಲಿ ಸಮಯಕ್ಕೆ ಸರಿಯಾಗಿ ರೋಗಿಗೆ ಬೇಕಾದ ಗುಂಪಿನ ರಕ್ತ ಸಿಗುವುದಿಲ್ಲ ಅದರಿಂದ ರಕ್ತದಾನ ಶಿಬಿರಗಳು ಹೆಚ್ಚುಹೆಚ್ಚಾಗಿ ನಡೆಯಬೇಕು. ರಕ್ತದಾನ ಮಾಡಿದರೆ ರೋಗಿಯ ಜೀವ ಬದುಕುಳಿಯುತ್ತದೆ. ರೋಗಿಯ ಜೀವ ಉಳಿಯುವುದರ ಜೊತೆಗೆ ರಕ್ತದಾನ ಮಾಡಿದ ವ್ಯಕ್ತಿಯಲ್ಲಿ ಹಳೇ ರಕ್ತ ಹೋಗಿ ಹೊಸ ರಕ್ತ ಬಂದು ಆರೋಗ್ಯ ವಂತರಾಗಿರುತ್ತಾರೆ ಎಂದರು.
ಹೆಚ್ಚಾಗಿ ಯುವಕರು ರಕ್ತದಾನವನ್ನು ಮಾಡಬೇಕು. ಈ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಬೇಕು. ತಾನೂ ಆರೋಗ್ಯವಾಗಿರಲು, ಇತರರನ್ನು ಆರೋಗ್ಯ ವಂತರನ್ನಾಗಿಸಲು ಹಿಂಜರಿಯದೆ ರಕ್ತ ದಾನವನ್ನು ಮಾಡಿ ಎಂದು ಮನವಿ ಮಾಡಿದರು.
ರಕ್ತದಾನ ಶಿಬಿರದಲ್ಲಿ ಯುವಕರು ಸ್ವಯಂ ಪ್ರೇತರಾಗಿ ಉಚಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿರುವವರಿಗೆ ಹಣ್ಣುಹಂಪಲು, ಪ್ರಮಾಣಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸವಿತಾ ಆನಂದ್, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮೀನಾ ಕೃಷ್ಣಾ ಮೂರ್ತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಶೋಭಾ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದಿನ್ನೂರು ಕೆ. ವೆಂಕಟೇಶ್ , ಊರಿನ ಮುಖಂಡರಾದ ಶೆಟ್ಟಪ್ಪ, ಪ್ರಕಾಶ್, ಅನ್ನ ದಾಸೋಹಿ ಮಲ್ಲೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.