ರಕ್ತ ಚರಿತ್ರೆಯ ಹೆಜ್ಜೆಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಕ್ತಚರಿತ್ರೆಯ ಹೆಜ್ಜೆಗಳು ಶ್ರೀ ಎನ್ ಟಿ ರಾಮರಾವ್ ಅವರು ತೆಲುಗು ಸಿನಿಮಾ ಲೋಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಪ್ರಖ್ಯಾತಿಯ ನಾಯಕನಟರಾದ್ದ ಇವರು ಆಂಧ್ರಪ್ರದೇಶದ ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಈ ದಿನಕ್ಕೆ
43 ವರ್ಷಗಳು ಕಳೆದಿವೆ, 1992 ರ ಮಾರ್ಚ್ 29 ರಂದು ಅಖಂಡ ಆಂಧ್ರ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ರಾಜಕಾರಣದ ಸಮಾವೇಶ ಏರ್ಪಡಿಸುವ ಮೂಲಕ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ‌.

ಆಂದ್ರ ಪ್ರದೇಶದ ಉದ್ದಗಲಕ್ಕೂ ಸಂಚರಿಸಿ ದೊಡ್ಡ ಪ್ರಮಾಣದ ಸಮಾವೇಶಗಳ ಮೂಲಕ ಜನತೆಯನ್ನು ಸಂಘಟಿಸಿದ ಎನ್ ಟಿ ರಾಮರಾವ್ ಅವರು ಕನ್ನಡ ನಾಡಿನ ನಮ್ಮ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿಗೆ ಹೊಂದಿಕೊಂಡಿರುವ ಹಿಂದೂಪುರ ಪಟ್ಟಣದಲ್ಲಿ ರಾಜಕಾರಣದ ಬಹಿರಂಗ ಸಮಾವೇಶ ಆಯೋಜಿಸಲಾಗಿತ್ತು.

 ಆ ಸಂದರ್ಭದಲ್ಲಿ ಎನ್ ಟಿ ರಾಮರಾವ್ ಅವರನ್ನು ಭಯಪಡಿಸಲು ಎದುರಾಳಿಗಳು ಬಾಂಬ್ ಸ್ಫೋಟಿಸಿ ದೊಡ್ಡ ಪ್ರಮಾಣದಲ್ಲಿ ಗಲಾಟೆ ಮಾಡಿಸಿದ್ದರು.

ಈ ವಿಚಾರದಲ್ಲಿ ಎನ್ ಟಿ ರಾಮರಾವ್ ಅವರು ಸಾಕಷ್ಟು ಪ್ರಮಾಣದಲ್ಲಿ ಆತಂಕಕ್ಕೆ ಒಳಗಾಗುತ್ತಾರೆ.  ಆ ಸಮಯದಲ್ಲಿ ಪಾವಗಡ ಪಟ್ಟಣಕ್ಕೆ  ಸಮೀಪವೇ ಇರುವ ಪೆನುಗೊಂಡ ತಾಲ್ಲೂಕಿನ ವೆಂಕಟಮ್ಮನಳ್ಳಿಯ ಪರಿಟಾಲ್ ರವಿ ಅವರ ಸಹಾಯ ಪಡೆಯಲು ತೀರ್ಮಾನಿಸಿದ ಎನ್ ಟಿ ರಾಮರಾವ್ ಅವರು ಪರಿಟಾಲ್ ರವಿಯನ್ನು ಆಂಧ್ರ ಪ್ರದೇಶದ ರಾಜಕಾರಣಕ್ಕೆ ಆಹ್ವಾನಿಸುತ್ತಾರೆ.

ಎನ್ ಟಿ ಆರ್ ಅವರ ಆಹ್ವಾನದ ಮೇರೆಗೆ ಪರಿಟಾಲ್ ರವಿ ಅವರು ದೊಡ್ಡ ಪ್ರಮಾಣದ ಜನ ಸಮೂಹದ ಬೆಂಬಲದೊಂದಿಗೆ ರಾಜಕಾರಣದಲ್ಲಿ ತೊಡಗಿಸಿಕೊಂಡರು. 

ಎನ್ ಟಿ ರಾಮರಾವ್ ಸ್ಥಾಪನೆಯ ತೆಲುಗುದೇಶಂ ಪಕ್ಷ ಆಂದ್ರ ಪ್ರದೇಶದಲ್ಲಿ ಅಧಿಕಾರಕ್ಕೆ ಬರಲು ಪರಿಟಾಲ್ ರವಿಯವರ ನಾಯಕತ್ವವು ಒಂದು ಕಾರಣವಿತ್ತು.

ಎನ್ ಟಿ ಆರ್ ಸರ್ಕಾರದಲ್ಲಿ ಕಾರ್ಮಿಕ ಸಚಿವರಾದ ರವಿ ಅವರು ಸಾಕಷ್ಟು ಪ್ರಮಾಣದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಆಂಧ್ರಪ್ರದೇಶದಲ್ಲಿ ಪ್ರಖ್ಯಾತಿ ನಾಯಕತ್ವ ಬೆಳೆಸಿಕೊಂಡಿದ್ದರು. 

10 ವರ್ಷಗಳ ಕಾಲ ತೆಲುಗುದೇಶಂ ಪಕ್ಷ ಆಂಧ್ರದಲ್ಲಿ ಸರ್ಕಾರ ರಚನೆ ಮಾಡಲು ರವಿ ಅವರ ಪ್ರಭಾವ ಬೀರುತ್ತದೆ. ಆ ಸಮಯದಲ್ಲಿ ರವಿ ಅವರು ಪಾವಗಡ ತಾಲ್ಲೂಕಿಗೆ ಬಂದಿರುವ ಸಂದರ್ಭದಲ್ಲಿ ರವಿ ಅವರ ಆತ್ಮಿಯ ವಿಶ್ವಾಸಿಗಳ ಜೊತೆಗೆ ರವಿ ಅವರನ್ನು ನಾನು ಭೇಟಿಯಾಗಿದ್ದೆ ಅವರೊಂದಿಗೆ ವಿಶ್ವಾಸದ ಪರಿಚಯ ಹಂಚಿಕೆ ಮಾಡಿಕೊಂಡಿದ್ದೆ. ಆ ವಿಚಾರ ಈ ಸಂದರ್ಭದಲ್ಲಿ ನೆನೆಯುತ್ತೇನೆ.

ಆಂಧ್ರ ಪ್ರದೇಶದ 2004 ಸಾರ್ವತ್ರಿಕ  ವಿಧಾನಸಭಾ ಮತ್ತು ದೇಶದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅಂದ್ರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಬಹುಮತ ಬರುವುದು ಆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿ ಶ್ರೀ ರಾಜಶೇಖರ್ ರೆಡ್ಡಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಬರುತ್ತಾರೆ. ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ ಕೆಲವೇ ತಿಂಗಳಲ್ಲಿ ಪರೀಟಾಲ್ ರವಿ ಅವರ ಹತ್ಯೆಯಾಗುತ್ತಾರೆ ರವಿ ಅವರ ಯುಗಾಂತ್ಯ ಅಂತ್ಯವಾಗುತ್ತದೆ.

ರಕ್ತಚರಿತ್ರೆ ಇದು ತೆಲುಗು ಸಿನಿಮಾ ಪರಿಟಾಲ್ ರವಿ ಅವರ ಪ್ರಭಾವದ ಬಗ್ಗೆ ಪ್ರಸ್ತಾವನೆ ಮಾಡಿ ಚಿತ್ರ ತಯಾರಿಸಿದ್ದಾರೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಪಡೆದಿದೆ.

ರಾಮ್ ಗೋಪಾಲ್ ವರ್ಮ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಪರಿಟಾಲ್ ರವಿ ಅವರ ಪ್ರಭಾವದ ಪಾತ್ರವನ್ನು ವಿವೇಕ್ ಒಬೆರಾಯ್ ಅವರು ಸಾಕಷ್ಟು ಪ್ರಭಾವಿಶಾಲಿಯಾಗಿ ಅಭಿನಯ ಮಾಡಿದ್ದಾರೆ.

 ಇದು ಆಂಧ್ರ ರಾಜಕಾರಣದ ರಕ್ತಚರಿತ್ರೆಯ ಹೆಜ್ಜೆಗಳು ಯುಗ=ಯುಗ ಕಳೆದರು ಮಾಸದೆ ಉಳಿದಿರುತ್ತದೆ.
ಲೇಖನ-ರಘು ಗೌಡ
, 9916101265

Share This Article
error: Content is protected !!
";