ಸೆನ್ಸಾರ್ ಪಾಸಾದ ‘ಬ್ಲಡಿ ಬಾಬು’ ಇದೇ ತಿಂಗಳು ತೆರೆಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸೆನ್ಸಾರ್ ಪಾಸಾದ ಬ್ಲಡಿ ಬಾಬು ಇದೇ ತಿಂಗಳು ತೆರೆಗೆ

   ಕೆಟ್ಟದ್ದು ಒಳ್ಳೇದರ ನಡುವಿನ ಹೋರಾಟದಲ್ಲಿ ಒಳ್ಳೆಯದಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ. ಇಂಥ ಕಥೆಗಳನ್ನು ಬೆಳ್ಳಿತೆರೆಮೇಲೆ ಸಾಕಷ್ಟು ನೋಡಿದ್ದೇವೆ. ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿರುವ ಬ್ಲಡಿ ಬಾಬು ಕೂಡ ದುಷ್ಟಶಕ್ತಿ ಹಾಗೂ ಆತ್ಮಶಕ್ತಿಯ ನಡುವಿನ ಸಮರದ ಸುತ್ತ ನಡೆಯುವ ಕಾನ್ಸೆಪ್ಟ್. ಹಿಂದಿ ಕಾಲದ ಮಾಟ, ಮಂತ್ರ  ಇಲ್ಲದೆ ಆಧುನಿಕ‌ ಶೈಲಿಯ  ಹಿಪ್ನಟೈಸ್ ಪ್ರಭಾವ  ಇಟ್ಟುಕೊಂಡು ಬ್ಲಡಿ ಬಾಬು ಚಿತ್ರವನ್ನು ನಿರ್ದೇಶಕ ರಾಜೇಶ್ ಮೂರ್ತಿ ಅವರು ನಿರೂಪಿಸಿದ್ದಾರೆ.

ದುಷ್ಟನ ಕೈವಶದಲ್ಲಿದ್ದ ನಾಯಕಿಯನ್ನು ನಾಯಕ ತನ್ನ ವಿಲ್ ಪವರ್ ನಿಂದ ಎದುರಿಸಿ ಹೇಗೆ ಬಿಡಿಸಿಕೊಂಡು ಬರುತ್ತಾನೆ ಎನ್ನುವುದೇ ಈ ಚಿತ್ರದ ಪ್ರಮುಖ ಎಳೆ. ಇತ್ತೀಚೆಗಷ್ಟೇ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಒ್ರಮಾಣಪತ್ರ ನೀಡಿದೆ. ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು ಇದೇ ತಿಂಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಸಿದ್ದತೆ ನಡೆಸಿದೆ‌.

  ಪ್ರಾರಂಭದಿಂದಲೂ  ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ದೇಶಿಸುತ್ತ ಬಂದಿರುವ ರಾಜೇಶ್ ಮೂರ್ತಿ ಅವರು  ಮತ್ತೊಂದು ಥ್ರಿಲ್ಲರ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

   ಬ್ಲಡಿಬಾಬು  ಮಗನಿಗೆ ತಂದೆಯೇ ಆಕ್ಷನ್ ಕಟ್ ಹೇಳಿರೋ ಚಿತ್ರ. ಈ ಮೂಲಕ  ಯಶಸ್ವಾ ಎರಡನೇ ಬಾರಿಗೆ ನಾಯಕನಾಗಿ ತೆರೆಮೇಲೆ ಬರುತ್ತಿದ್ದಾರೆ.

   ರಾಜೇಶ್ ಮೂರ್ತಿ ಅವರೇ  ಕಥೆ ಚಿತ್ರಕಥೆ ಬರೆದು  ನಿರ್ದೇಶಿಸಿರೋ ಈ ಚಿತ್ರವನ್ನು   ಏಂಜಲ್ ಡ್ರೀಮ್ಸ್ ಎಂಟರ್ ಟೈನ್ ಮೆಂಟ್ಸ್ ಮೂಲಕ ಡೋಮ್ನಿಕ್ ಅವರು ನಿರ್ಮಿಸಿದ್ದಾರೆ.

 ಸೈಕಲಾಜಿಕಲ್, ಆಕ್ಷನ್ ಥ್ರಿಲ್ಲರ್  ಕಥಾಹಂದರ ಹೊಂದಿರುವ ಬ್ಲಡಿ ಬಾಬು ಚಿತ್ರಕ್ಕೆ  ಬೆಂಗಳೂರು, ನಂದಿ ಹಿಲ್ಸ್ ಹಾಗೂ ಚಿಕ್ಕಮಗಳೂರು ಸುತ್ತಮುತ್ತ 25ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ನವನಟಿ  ಸ್ಮಿತಾ ಈ ಚಿತ್ರದ ನಾಯಕಿಯಾಗಿದ್ದುಬಾಲಿವುಡ್ ಖಳನಟ ದಿಲೀಪ್ ಕುಮಾರ್ ಈ ಚಿತ್ರದ ವಿಲನ್  ಪಾತ್ರ ನಿರ್ವಹಿಸಿದ್ದಾರೆ. ನಟ, ರಾಜಕಾರಣಿ ನೆ.ಲ.ನರೇಂದ್ರ ಬಾಬು ಅವರು ಚಿತ್ರದಲ್ಲಿ ನಾಯಕಿಯ ತಂದೆಯಾಗಿ ಕಾಣಿಸಿಕೊಂಡಿದ್ದಾರೆ.

    ಈ ಹಿಂದೆ ಲಿಪ್ ಸ್ಟಿಕ್ ಮರ್ಡರ್, ಜೋಕರ್ ಜೋಕರ್, ಸೈಕೋಮ್ಯಾಕ್ಸ್ ನಂಥ ಕ್ರೈಂ, ಥ್ರಿಲ್ಲರ್ ಚಿತ್ರಗಳನ್ನೇ ಮಾಡಿಕೊಂಡು ಬಂದಿದ್ದ  ರಾಜೇಶ್ ಮೂರ್ತಿ ಅವರು ಮತ್ತೊಮ್ಮೆ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಕೈ ಹಾಕಿದ್ದಾರೆ.  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ ಸಂಕಲನದ ಕೆಲಸವನ್ನೂ ನಿರ್ವಹಿಸಿದ್ದಾರೆ. ವಿಭಿನ್ನ ಶೈಲಿಯ 4 ಸಾಹಸ‌ ದೃಶ್ಯಗಳು ಚಿತ್ರದಕ್ಲಿವೆ.

ಜತೆಗೆ ಈ ಚಿತ್ರದಲ್ಲಿ 3 ಹಾಡುಗಳಿದ್ದು ನಿತೀಶ್ ಕುಮಾರ್  ಸಂಗೀತ ಸಂಯೋಜನೆ ಮಾಡಿದ್ದಾರೆ. “ಬ್ಲಡಿ‌ ಬಾಬು” ಚಿತ್ರದಲ್ಲಿ    ಯಶಸ್ವಾ, ಸ್ಮಿತಾ, ವಿನೋದ್ ಆರ್.  ಛಾಯಾಗ್ರಹಣ  ನಿರ್ವಹಿಸಿದ್ದಾರೆ.

 

Share This Article
error: Content is protected !!
";