Ad imageAd image

ಇಂದು ಸಂಜೆ 6ಕ್ಕೆ ಬಾಬ್ ಮಾರ್ಲಿ From Kodihalli’

News Desk

ಚಂದ್ರವಳ್ಳಿ ನ್ಯೂಸ್, ತಮಿಳುನಾಡು:
ಬಾಬ್ ಮಾರ್ಲಿ From Kodihalli’ಗುರುತುಅನ್ನುವುದು ಕೆಲವರಿಗೆ ಹೆಮ್ಮೆಯಾದರೆ, ಕೆಲವರಿಗದು ಅಸಹ್ಯ, ಹಿಂಸೆ, ಜೀವನದ್ದುದ್ದಕ್ಕೂ ಹೊತ್ತು ತಿರುಗಬೇಕಾದ ಹೆಣಭಾರದ ಚಾಕರಿ. ಹಲವು ಬಾರಿ ಉಳಿವಿಗಾಗಿಗುರುತುಗಳನ್ನು ಮುಚ್ಚಿಡುತ್ತಾ ಸಾಗುವುದೇಬದುಕುಅಂತ ಅನ್ನಿಸಿಕೊಂಡು ಹರಿಯುತ್ತಾ ಹಗುರಾಗುವುದು…,ಸಾಗದ ದಾರಿಯಾಗಿ ಕಂಡು ದಣಿವಾಗುತ್ತದೆ.ದಣಿವಾಗುತ್ತದೆ ಎಂಬ ಕಾರಣಕ್ಕೆ ಹಾರಾಡುವ ಬಯಕೆಯನ್ನು ಬಿಡುವಂತೆಯೂ ಇರುವುದಿಲ್ಲ. ಕತ್ತಲ ದಾರಿಯಲ್ಲಿ ಮಿಂಚುಹುಳುಗಳಿಗಾಗಿ ಜೀವ ಆತುಕೊಳ್ಳಬೇಕಾಗುತ್ತದೆ.ಆಗ…ಕತ್ತಲೊಂದು ಸಂಭ್ರಮ‘ ‘ಬೆಳಕೊಂದು ಸಂಭ್ರಮ.….ಹೀಗೆ ಗುರುತಿನ ಸುತ್ತ ಇರುವ ಹಲವು ಸಂಕೀರ್ಣ ವೀರೋಧಾಭಾಸಗಳನ್ನು ಎದುರುಗೊಳ್ಳುವ ಕಥನಗಳ ಗೊಂಚಲು ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ.ಇಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘Waiting for a Visa’ ಒಂದು ರೂಪಕವಾಗಿ ಕಂಡು ಅವರು ನಿಜಕ್ಕೂ ಪ್ರವೇಶ ಕೇಳುತ್ತಿರುವುದು ಎಲ್ಲಿಗೆ…!? ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ…….ಪಠ್ಯ ಆಕರ: ಎನ್.ಕೆ ಹನುಮಂತಯ್ಯ, ಚಂದ್ರಶೇಕರ್ ಕೆರಚನೆ,ವಿನ್ಯಾಸ, ನಿರ್ದೇಶನ: ಲಕ್ಷ್ಮಣ್ ಕೆ ಪಿಡ್ರಮಟರ್ಗ್: ವಿ.ಎಲ್. ನರಸಿಂಹಮೂರ್ತಿ
ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ
ನಾಟಕ ಪ್ರದರ್ಶನಚಿತ್ರದುರ್ಗದ  ಲಂಕೇಶ್ ವಿಚಾರ ವೇದಿಕೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ನಾಡು-ನುಡಿ ಬಳಗದ ಸಹಯೋಗದಲ್ಲಿ  ಇಲ್ಲಿನ ತರಾಸು ರಂಗಮಂದಿರದಲ್ಲಿ ಭಾನುವಾರ ಸಂಜೆ ಆರು ಗಂಟೆಗೆ ಬೆಂಗಳೂರಿನ ಜಂಗಮ ಕಲೆಕ್ಟಿವ್ ನಾಟಕ ತಂಡದಿಂದ ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿನಾಟಕ ಪ್ರದರ್ಶನ ಇದೆ ಎಂದು ಲಂಕೇಶ್ ವಿಚಾರ ವೇದಿಕೆ ಸಂಚಾಲಕ ಜಡೇಕುಂಟೆ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಉದ್ಘಾಟಿಸಲಿದ್ದಾರೆ. ನಾಟಕದ ಪೋಸ್ಟರ್ ಬಿಡುಗಡೆಯನ್ನು ಜೆಡಿಎಸ್ ರಾಜ್ಯ ಮುಖಂಡ ಬಿ. ಕಾಂತರಾಜ್ ಅನಾವರಣಗೊಳಿಸುವರು. ಶಾಸಕ ಕೆ.ಸಿ. ವೀರೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಓ ಸೋಮಶೇಖರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ, ಮಾಧ್ಯಮ ಆಕಾಡೆಮಿ ಸದಸ್ಯ ಹಾಗೂ ಪತ್ರಕರ್ತ ಎಂ.ಎನ್. ಅಹೋಬಳಪತಿ, ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಸಾಮಾಜಿಕ ಚಿಂತಕ ಕೋಡಿಹಳ್ಳಿ ಸಂತೋಷ್, ವಕೀಲ ದಾಸರಹಳ್ಳಿ ರಾಜು, ಉದ್ಯಮಿ ಅಹೋಬಳ ಅರುಣ್  ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. 

- Advertisement -  - Advertisement - 
Share This Article
error: Content is protected !!
";