ಪಾಕಿಸ್ತಾನದಲ್ಲಿ ಬಾಂಬ್ ಎಸೆತ, ಹಲವು ಸಾವು-ನೋವುಗಳು ಸಂಭವಿಸಿವೆ

News Desk

ಚಂದ್ರವಳ್ಳಿ ನ್ಯೂಸ್, ಇಸ್ಲಾಮಾಬಾದ್:
ಪಾಕಿಸ್ತಾನದಲ್ಲಿ ಬಾಂಬ್ ಎಸೆದು ಅಥವಾ ಬಾಂಬ್ ಸ್ಫೋಟಗೊಂಡು 30 ನಾಗರಿಕರು ಬಲಿಯಾಗಿದ್ದಾರೆ ಎನ್ನುವ ವಿಚಾರ ವರದಿಯಾಗಿದೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿವೆ.
ಪಾಕಿಸ್ತಾನದ ಯುದ್ಧ ವಿಮಾನಗಳು ತಿರಾ ಕಣಿವೆಯ ಮಾಟ್ರೆ ದಾರಾ ಗ್ರಾಮದ ಮೇಲೆ ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಎಂಟು ಬಾಂಬ್‌ಗಳನ್ನು ಬೀಳಿಸಿದೆ. ಇದರಿಂದಾಗಿ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ವಿನಾಶ ಉಂಟಾಯಿತು.

- Advertisement - 

ಹಾಕಲಾಗಿರುವ ಬಾಂಬ್ ಗಳಾದ LS-6 ವರ್ಗದ ವಿನಾಶಕಾರಿಯಾಗಿದ್ದು, ಇವುಗಳನ್ನು ಚೀನಾದ JF-17 ಯುದ್ಧ ವಿಮಾನಗಳಿಂದ ಬೀಳಿಸಲಾಗಿತ್ತು. ಕೊಲ್ಲಲ್ಪಟ್ಟವರೆಲ್ಲರೂ ನಾಗರಿಕರು. ದಾಳಿಯ ಬಗ್ಗೆ ಪಾಕಿಸ್ತಾನ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಬಾಂಬ್ ದಾಳಿಯಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಸೂಚಿಸುತ್ತವೆ. ಸ್ಥಳೀಯ ನಿವಾಸಿಗಳ ಪ್ರಕಾರ, ಗ್ರಾಮಸ್ಥರು ನಿದ್ರಿಸುತ್ತಿದ್ದರು, ಆಗ ಅವರಿಗೆ ದೊಡ್ಡ ಸ್ಫೋಟಗಳ ಶಬ್ದ ಕೇಳಿ ಎಚ್ಚರವಾಯಿತು. ಬಾಂಬ್ ಸ್ಫೋಟವು ಎಷ್ಟು ವಿನಾಶಕಾರಿಯಾಗಿತ್ತೆಂದರೆ ಗ್ರಾಮದ ದೊಡ್ಡ ಭಾಗಗಳು ನಾಶವಾಗಿವೆ. ಕೆಲವು ವಿಡಿಯೋಗಳು ಹರಿದಾಡುತ್ತಿವೆ.

- Advertisement - 

ಅದರಲ್ಲಿ ಹಲವು ಮಕ್ಕಳು ಸೇರಿದಂತೆ ಹಲವರ ಶವ ನೆಲದ ಮೇಲೆ ಬಿದ್ದಿದ್ದವು. ರಕ್ಷಣಾ ತಂಡಗಳು ಅವಶೇಷಗಳ ಅಡಿಯಲ್ಲಿ ಶವಗಳನ್ನು ಹುಡುಕುತ್ತಿವೆ ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳುತ್ತದೆ.

ಈ ಘಟನೆ ಪಾಕಿಸ್ತಾನದೊಳಗಿನ ಆಂತರಿಕ ಸಂಘರ್ಷ ಮತ್ತು ಕಲಹವನ್ನು ಸಹ ಎತ್ತಿ ತೋರಿಸುತ್ತದೆ. ಖೈಬರ್ ಪಖ್ತುಂಖ್ವಾ ಪ್ರದೇಶವು ಬಹಳ ಹಿಂದಿನಿಂದಲೂ ಅಶಾಂತಿಯ ಪ್ರದೇಶವಾಗಿದ್ದು, ಅಲ್ಲಿ ಪಾಕಿಸ್ತಾನ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ ಎನ್ನಲಾಗುತ್ತಿದೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯವು ಈ ಹಿಂದೆ ಹಲವಾರು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ಸಾಕ್ಷಿಯಾಗಿದ್ದು, ಈ ಪ್ರದೇಶದಿಂದ ನಾಗರಿಕರ ಸಾವು ನೋವುಗಳ ವರದಿಗಳು ಬಂದಿವೆ.

 

Share This Article
error: Content is protected !!
";