ಚಂದ್ರವಳ್ಳಿ ನ್ಯೂಸ್, ಹರಪ್ಪನಹಳ್ಳಿ(ವಿಜಯನಗರ ಜಿಲ್ಲೆ):
ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರು ಹರಪನಹಳ್ಳಿ ಪಟ್ಟಣದ ಹೊರವಲಯದ ಅನಂತನಹಳ್ಳಿ ಸರ್ಕಾರಿ ಐಟಿಐ ಎದುರಿಗಿರುವ ಅರಣ್ಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಒಂದೇ ಮರದ ಕೊಂಬೆಗೆ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳಾದ ಜಿಟ್ಟಿನಕಟ್ಟೆ ಗ್ರಾಮದ ಮದ್ದನಸ್ವಾಮಿ(18), ಬಂಡ್ರಿ ಗ್ರಾಮದ ದೀಪಿಕಾ(18) ನಿವಾಸಿಗಳಾಗಿದ್ದಾರೆ.
ಹರಪನಹಳ್ಳಿ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ಮದ್ದನಸ್ವಾಮಿ ಹಾಗೂ ದೀಪಿಕಾ ಇಬ್ಬರೂ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಏ.15 ಪಿಯುಸಿ ಫಲಿತಾಂಶ ಬಂದ ದಿನದಿಂದ ನಾಪತ್ತೆಯಾಗಿದ್ದರು. ಇಬ್ಬರೂ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಯಾಗಿದ್ದು, ದೀಪಿಕಾ 438 ಹಾಗೂ ಮದ್ದನಸ್ವಾಮಿ 373 ಅಂಕ ಪಡೆದಿದ್ದರು.
ಪ್ರೇಮಿಗಳಿಬ್ಬರು ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ತನಿಖೆಯಿಂದ ತಿಳಿಯಬೇಕಾಗಿದೆ. ಘಟನಾ ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.