ಡಿ-16ರಂದು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮೋತ್ಸವ

News Desk

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಮೆದೇಹಳ್ಳಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 26ನೇ ವರ್ಷದ ಬ್ರಹ್ಮೋತ್ಸವ ಪೂಜಾ ಕಾರ್ಯಕ್ರಮವು ಡಿಸೆಂಬರ್-16 ರಿಂದ 21 ರವರೆಗೆ ನಡೆಯಲಿದೆ.

ಇದರ ನೇತೃತ್ವವನ್ನು ಕೇರಳದ ಪ್ರಧಾನ ಅರ್ಚಕ ವಿಷ್ಣು ಭಟ್ಟಾದ್ರಿ ಪಾಡ್ ತಂತ್ರಿಗಳು ,ತಿಚೂರು. ಹಾಗೂ ಸತೀಶ್ ಶರ್ಮಾ ಮತ್ತು ಸಂಗಡಿಗರಿಂದ ದೇವಸ್ಥಾನದಲ್ಲಿ ಧ್ವಜಾರೋಹಣ ಮಾಡುವ ಮುಖಾಂತರ ಪೂಜಾ ಕಾರ್ಯಕ್ರಮವು ಪ್ರಾರಂಭವಾಗುವುದು.

- Advertisement - 

 ಈ ಸಂದರ್ಭದಲ್ಲಿ ಬೆಳಗ್ಗೆ ಮಹಾ ಗಣಪತಿ ಹೋಮ, ಸುದರ್ಶನ ಹೋಮ, ಅಭಿಷೇಕ ,ನವಕಂಪ, ಕಳಸಾ ಪೂಜೆ ಉಚ್ಚ ಪೂಜೆ, ಹಾಗೂ ಸಂಜೆ ಸಮಯದಲ್ಲಿ ಅಂಕುರ ಪೂಜೆ, ಮಳಪೂಜೆ, ದೀಪಾರಾಧನೆ, ಶ್ರೀ ಭೂತ ಬಲಿ, ಭಗವತಿ ಸೇವಾ, ಅತ್ತಲಾ ಪೂಜೆ, ಗಣ ಹೋಮ, ಚತು ಶುದ್ದಿ, ಧಾರಾ, ಪಂಚಕ ,ಪಂಚಗವ್ಯ ಇನ್ನಿತರೆ ದೇವರಿಗೆ ಅಭಿಷೇಕ ಹಾಗೂ ಇನ್ನಿತರೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಗುವುದು.

ಪೂಜಾ ಕಾರ್ಯಕ್ರಮದಲ್ಲಿ ಡಿಸೆಂಬರ್-20 ಶನಿವಾರ ಸಂಜೆ 7-30 ರಿಂದ ಪಡಿ ಪೂಜಾ ಕಾರ್ಯಕ್ರಮ ನೆರವೇರಲಾಗುವುದು. ಡಿ.28 ಭಾನುವಾರ ಮಧ್ಯಾಹ್ನ ಮಹಾ ಅನ್ನದಾನ ಕಾರ್ಯಕ್ರಮ ನೆರವೇರಿಸಲಾಗುವುದು.

- Advertisement - 

ಕಾರ್ಯಕ್ರಮ ಸಾರ್ವಜನಿಕವಾಗಿದ್ದು ಸಕಲ ಭಕ್ತಾದಿಗಳು ಆಗಮಿಸಿ ಪ್ರಸಾದವನ್ನು ಸ್ವೀಕರಿಸ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕರ್ನಾಟಕ ಅಯ್ಯಪ್ಪ ಸ್ವಾಮಿ ಅನ್ನದಾನ ಸಮಿತಿಯ ಅಧ್ಯಕ್ಷ ಶರಣ್ ಕುಮಾರ್,  ದೇವಸ್ಥಾನದ ಕಾರ್ಯದರ್ಶಿ ಎಂ ಪಿ ವೆಂಕಟೇಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 

 

Share This Article
error: Content is protected !!
";