ಬ್ರ್ಯಾಂಡ್‌ ಬೆಂಗಳೂರು ಹೆಸರಲ್ಲಿ ದೋಚುತ್ತಿರುವ ಕಲೆಕ್ಷನ್‌ಗಿರಾಕಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತೆರೆ ಹಿಂದೆ ಶಿಖಂಡಿ ಆಟವಾಡುತ್ತಿರುವ ಜೈಲು ಹಕ್ಕಿಗೆ ಸಿಎಂ ಕುರ್ಚಿ ಕೈಗೆಟುಕದ ಹುಳಿ ದ್ರಾಕ್ಷಿ..!ಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಹರಿಹಾಯ್ದಿದೆ.

ತನ್ನ ಜೆಡಿಎಸ್ ಎಕ್ಸ್ ಖಾತೆಯಲ್ಲಿ ಡಿಸಿಎಂ ಹೆಸರು ಪ್ರಸ್ತಾಪ ಮಾಡದೇ ಪರೋಕ್ಷವಾಗಿ ಟೀಕಿಸಿರುವ ಜೆಡಿಎಸ್, ಹೈಕಮಾಂಡ್‌ಗುಲಾಮನಾಗಿ ಕಪ್ಪ ಕಳುಹಿಸುವ ಕಲೆಕ್ಷನ್‌ಏಜೆಂಟ್‌, ಬಂಡೆ ಕಳ್ಳನ ರಾಜಕೀಯ ಭ್ರಷ್ಟಾಚಾರದ ಇತಿಹಾಸವನ್ನು ಸಂಪುಟಗಳಲ್ಲಿ ಪ್ರಕಟಿಸಬಹುದು ಎಂದು ವಾಗ್ದಾಳಿ ಮಾಡಿದೆ.

ಹೊಡಿಬಡಿ ಸಂಸ್ಕೃತಿಯ ರಿಯಲ್‌ಎಸ್ಟೇಟ್‌ದಂಧೆಕೋರ, ಹವಾಲಾ ಮಾಫಿಯಾ, ಭೂಗಳ್ಳ @ ಸಿಡಿ ಶಿವುನ ಆಸ್ತಿ ಸಂಪಾದನೆಯ ಗುಟ್ಟು ಇಡೀ ದೇಶಕ್ಕೆ ಚಿರಪರಿಚಿತ ಎಂದು ಜೆಡಿಎಸ್ ಆರೋಪಿಸಿದೆ.

ಬೇನಾಮಿ ಆಸ್ತಿ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ರೌಡಿ ಕೊತ್ವಾಲನ ಶಿಷ್ಯ ಒಂದು ಕೈ ಮೇಲು. ಸೋಲಾರ್‌ಪಾರ್ಕ್‌ಯೋಜನೆಯಲ್ಲಿ ಎತ್ತುವಳಿ ಮಾಡಿದ್ದು ಎಷ್ಟು ..? ಬ್ರ್ಯಾಂಡ್‌ ಬೆಂಗಳೂರು ಹೆಸರಲ್ಲಿ ದೋಚುತ್ತಿರುವ ಕಲೆಕ್ಷನ್‌ಗಿರಾಕಿಯ ಘೋಷಿತ 1,413 ಕೋಟಿ ರೂ. ಆಸ್ತಿ ಗಳಿಕೆಯ ಸಿಕ್ರೇಟ್‌ಇವೇ ಅಲ್ಲವೇ..? ಎಂದು ಜೆಡಿಎಸ್ ಪ್ರಶ್ನಿಸಿದೆ.

- Advertisement -  - Advertisement - 
Share This Article
error: Content is protected !!
";