ಚಂದ್ರವಳ್ಳಿ ನ್ಯೂಸ್, ಹಾವೇರಿ:
ಮಾಜಿ ಸಚಿವ ಹೆಚ್. ಆಂಜನೇಯ ಅವರು ಬೆಂಗಳೂರು ಏರ್ಪೋರ್ಟ್ನಲ್ಲಿ ಮುಸ್ಲಿಂರು ನಮಾಜ್ ಮಾಡಿರುವುದನ್ನು ಸಮರ್ಥಿಸಿಕೊಳ್ಳುವ ಭರಾಟೆಯಲ್ಲಿ ಹಿಂದೂ ಹಬ್ಬಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಂಗಳೂರು ಏರ್ಪೋರ್ಟ್ನಲ್ಲಿ ಮುಸ್ಲಿಮರು ಮಾಡಿದ್ದು ಪ್ರಾರ್ಥನೆ, ಕೋಲು ಹಿಡಿದುಕೊಂಡು ಹೋಗೊದಲ್ಲ. ಅವರಲ್ಲಿರೋ ಶ್ರದ್ಧೆಯನ್ನ ನೋಡಿ ನೀವೆಲ್ಲರೂ ಕಲಿತುಕೊಳ್ಳಿ ಎಂದು ಆರ್ ಎಸ್ಎಸ್ ಸಂಘದ ಹೆಸರೇಳದೆ ಟೀಕಾಪ್ರಹಾರ ಮಾಡಿದ ಆಂಜನೇಯ ಅವರು ಮುಂದುವರೆದು ಮಾತನಾಡಿ,
ಇವರಂಗೆ ನಾಮ ಹಾಕಿಕೊಂಡು, ಪೂಜೆ ಮಾಡಿ ತಟ್ಟೆಗೆ ಹಾಕಯ್ಯ ಅಂತ ಕೇಳಿಲ್ಲ. ಅವರು ಮೂರ್ಖರಲ್ಲ, ಮಸೀದಿ ಇಲ್ಲ ಅಂತೇಳಿ ಅಲ್ಲಿ ನಮಾಜ್ ಮಾಡಿರಬಹುದು ಎಂದು ಮಾಜಿ ಸಚಿವ ಆಂಜನೇಯ ಸಮರ್ಥಿಸಿಕೊಂಡಿದ್ದಾರೆ.
ಮುಸ್ಲಿಂರು ಮಾಡಿರುವ ನಮಾಜ್ ನಲ್ಲೂ ನಾವು ಸಣ್ಣತನ ತೋರಿಸಿದ್ರೆ ಹೇಗೆ? ಗಣೇಶನ ಹಬ್ಬದಲ್ಲಿ ಬ್ರ್ಯಾಂಡಿ ಅಂಗಡಿಗಳು ಫುಲ್ ರಶ್ ಇರುತ್ತವೆ. ಗಣೇಶ ಹಬ್ಬದಲ್ಲಿ ಹೂ, ಹಣ್ಣಿನ ವ್ಯಾಪಾರ ಆಗಲ್ಲ. ಬದಲಾಗಿ ಹೈಕ್ಲಾಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು ಹೌಸ್ಫುಲ್ ಆಗುತ್ತವೆ ಎಂದು ಆಂಜನೇಯ ಅವರು ನೀಡಿರುವ ಹೇಳಿಕೆಯಿಂದ ಎಲ್ಲೆಡೆ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

