ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಹೆಮ್ಮೆಯ ವೀರ ಯೋಧ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ ಅವರು ಹುತಾತ್ಮರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್‌ನ ರಾಜೌರಿ ಗಡಿಯಲ್ಲಿ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಿದ್ದ ವೇಳೆ ವೀರಮರಣ ಹೊಂದಿದ್ದಾರೆ.
ಹರಿಯಾಣದ ಪಲ್ವಾಲ್‌ಜಿಲ್ಲೆಯ ದಿನೇಶ್ ಕುಮಾರ್ ಶರ್ಮಾ ಅವರು ದೇಶಕ್ಕಾಗಿ ಬಲಿದಾನಗೈದು ಅಮರರಾಗಿದ್ದಾರೆ. ದೇಶಭಕ್ತಿ, ಅದಮ್ಯ ಶೌರ್ಯ ಮತ್ತು ತ್ಯಾಗಕ್ಕೆ ಇಡೀ ದೇಶವೇ ನಮನ ಸಲ್ಲಿಸುತ್ತದೆ.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಮಸ್ತ ಭಾರತೀಯರು ಪರವಾಗಿ ಪ್ರಾರ್ಥಿಸುತ್ತೇವೆ ಎಂದು ಜೆಡಿಎಸ್ ತಿಳಿಸಿದೆ.