ಕಲಾಶ್ರೀ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲೆಗೆ ಕೀರ್ತಿ ತನ್ನಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವ ಸಲುವಾಗಿ ರಾಜ್ಯ ಬಾಲ ಭವನದ ಕಲಾಶ್ರೀ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಹಾಗೂ ಜಿಲ್ಲಾ ಬಾಲ ಭವನದ ಕಾರ್ಯದರ್ಶಿ ಕೆ.ಹೆಚ್.ವಿಜಯಕುಮಾರ್ ಹೇಳಿದರು.

ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಬಾಲ ಭವನದಲ್ಲಿ ಸೋಮವಾರ ಮಕ್ಕಳ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದಲ್ಲಿ ನಡೆಯುವ ಕಲಾಶ್ರೀ ಶಿಬಿರದಲ್ಲಿ ಬಾಗವಹಿಸುವ ಮಕ್ಕಳ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಸಂಸ್ಕಾರ ಮತ್ತು ಪ್ರಾಮಾಣಿಕತೆ, ಶ್ರದ್ಧೆ, ಮೂಡಲು ಕಲೆಗಳು ಬಹಳ ಮುಖ್ಯ, ಇಂದಿನ ಯಾಂತ್ರಿಕ ಯುಗದಲ್ಲಿ ಮಕ್ಕಳು ಅಂಕಕ್ಕೆ ಮಾತ್ರ ಸೀಮಿತವಾಗಿ ಸೃಜನಶೀಲ ಚಟುವಟಿಕೆಗಳಿಗೆ ಆಸಕ್ತಿ ಕಡಿಮೆಯಾಗುತ್ತಿದೆ.

- Advertisement - 

ಬಾಲ್ಯದಲ್ಲಿಯೇ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ಮೂಡಿದರೆ ಮಕ್ಕಳು ಮುಂದಿನ ಭವಿಷ್ಯವನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಮಕ್ಕಳಿಗೆ ಪಠ್ಯದ ಜೊತೆಗೆ ಯಾವುದಾದರೂ ಒಂದು ಚಟುವಟಿಕೆಯಲ್ಲಿ ಭಾಗವಹಿಸುವಂತೆ ಫೋಷಕರು ಪ್ರೋತ್ಸಾಹ ನೀಡಬೇಕು ಎಂದರು.

ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಹಾಗೂ ಜಿಲ್ಲಾ ಬಾಲ ಭವನದ ಕಾರ್ಯದರ್ಶಿ  ಕೆ.ಹೆಚ್.ವಿಜಯಕುಮಾರ್ ಪ್ರಮಾಣಪತ್ರ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರು.
ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಗಂಗಪ್ಪ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆ ಮತ್ತು ಸಂಯೋಜನೆಯನ್ನು ಜಿಲ್ಲಾ ಬಾಲ ಭವನದ ಕಾರ್ಯಕ್ರಮ ಸಂಯೋಜಕ ಡಿ ಶ್ರೀಕುಮಾರ್ ನೆರವೇರಿಸಿದರು.

- Advertisement - 

ವೇದಿಕೆಯಲ್ಲಿ ಜಿಲ್ಲಾ ಬಾಲಭವನ ಪ್ರಭಾರ ವ್ಯವಸ್ಥಾಪಕ ಸುರೇಶ್, ತೀರ್ಪುಗಾರರಾಗಿ ಮಕ್ಕಳ ಸಾಹಿತಿ ಪರಮೇಶ್ವರಪ್ಪ ಕುದರಿ, ನಿರ್ಮಲ ಮರಡಿಹಳ್ಳಿ. ಸಂಗೀತ ಶಿಕ್ಷಕ ಕೋಕಿಲ, ವಿಜ್ಞಾನ ಸಂವಾಹಕರಾದ ಎಂ.ಅರ್.ದಾಸೇಗೌಡ, ಎಂ.ಗಿರಿಯಪ್ಪ. ಚಿತ್ರ ಕಲಾವಿದ ಕೆ.ಪಿ ರಾಘವೇಂದ್ರ ಸ್ವಾಮಿ, ಶಿಲ್ಪ ಕಲಾವಿದರಾದ ಶಿವಕುಮಾರ್, ನಿರ್ಮಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

Share This Article
error: Content is protected !!
";