ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರ ಸದೃಢ ನಾಯಕತ್ವದಲ್ಲಿ ಬಿಎಸ್ಎನ್ಎಲ್ ಐತಿಹಾಸಿಕ ತಿರುವು ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
BSNL ಸಂಸ್ಥೆಯನ್ನು ಲಾಭದಾಯಕ ಹಾದಿಗೆ ಕೊಂಡೊಯ್ಯಲೇಬೇಕೆಂಬ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಸಂಕಲ್ಪ ತೊಟ್ಟು BSNL ನ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು 1.64 ಲಕ್ಷ ಕೋಟಿ ಪುನಶ್ಚೇತನ ಪ್ಯಾಕೇಜ್ ನೀಡಿದ್ದರು.
ರಾಷ್ಟ್ರವ್ಯಾಪಿ 4G ರೋಲ್‌ಔಟ್‌ಗಾಗಿ 44,993 ಕೋಟಿ ಸ್ಪೆಕ್ಟ್ರಮ್ ಹಂಚಿಕೆ ಮಾಡಲಾಗಿತ್ತು, ಆತ್ಮನಿರ್ಭರ ಭಾರತ ದೃಷ್ಟಿಗೆ ಅನುಗುಣವಾಗಿ ಸ್ವದೇಶಿ 4G ನಿಯೋಜನೆ ಮಾಡುವ ಮೂಲಕ 40,399 ಕೋಟಿಗಳ ಸಾಲ ನೀಡಿ, ಫೈಬರ್ ನೆಟ್‌ವರ್ಕ್ ಮತ್ತು ಗ್ರಾಮೀಣ ಸಂಪರ್ಕವನ್ನು ವಿಸ್ತರಿಸಲು BBNL ನೊಂದಿಗೆ ವಿಲೀನ ಮಾಡಿದ ಪರಿಣಾಮವಾಗಿ ಇಂದು ಬಿಎಸ್ಎನ್ಎಲ್ ತನ್ನ ಯಶೋಗಾಥೆ ಆರಂಭಿಸುವಂತಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಮುಳುಗುತ್ತಿದ್ದ BSNL ಸಂಸ್ಥೆ NDA ಸರ್ಕಾರದ ಅವಧಿಯಲ್ಲಿ ಪುಟಿದೇಳುತ್ತಿದೆ ಎಂದು ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.