ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಬಿ.ಟಿ ಜಗದೀಶ್ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜಕ್ಕೆ ೨೦೨೫-೨೬ ರಿಂದ ೨೦೨೯-೩೦ ನೇ ಸಾಲಿನವರೆಗೆ ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಬಿ.ಟಿ.ಜಗದೀಶ್ ಆಯ್ಕೆಯಾಗಿದ್ದಾರೆ ಎಂದು ಚಿತ್ರದುರ್ಗ, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್. ಕೆ. ರಾಮಕೃಷ್ಣ ತಿಳಿಸಿದ್ದಾರೆ.

- Advertisement - 

೨೦೨೫-೨೬ ರಿಂದ ೨೦೨೯-೩೦ ನೇ ಸಾಲಿನ ೫ ವಷಗಳ ಅವಧಿಗೆ ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಚುನಾವಣೆಯನ್ನು ಡಿ.೧೫ ರಂದು ನೆಡೆಸಿದ್ದು, ಈ ಚುನಾವಣೆಯಲ್ಲಿ ೧೪ ಸದಸ್ಯರುಗಳಾದ ಸತೀಶ್, ಪಾರ್ವತಮ್ಮ ಅಜ್ಜಪ್ಪ, ಬಿ.ಟಿ.ಜಗದೀಶ್, ಎಸ್.ಎಲ್.ನಾಗರಾಜು, ಸಿ.ಯೋಗರಾಜ, ಎಂ.ಮಹೇಶ್ವರಪ್ಪ, ಗಂಗಾಧರ ಬಿನ್ ಗೋವಿಂದಪ್ಪ, ಕೆ.ಪ್ರಾಣೇಶ್, ಆರ್.ಶಶಿಧರ್, ಮಂಜುಳಮ್ಮ ಲಕ್ಷ್ಮಣಪ್ಪ, ಎಂ.ಪರಮೇಶ್, ಎನ್.ಪರಶುರಾಮ್ ಬಿನ್ ಜಿ.ನಿಂಗಪ್ಪ, ಎನ್.ಹನುಮಂತರೆಡ್ಡಿ, ಶಂಭುಲಿಂಗಪ್ಪ ಸಿ ಇವರುಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

- Advertisement - 

ಡಿ.೨೬ರಂದು ಗುರುವಾರ ಬೆಳಿಗ್ಗೆ ತಾಲ್ಲೂಕು ಕೃಷಿಕ ಸಮಾಜಕ್ಕೆ ಹೊಸದಾಗಿ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಏರ್ಪಡಿಸಿದ್ದು ಸಭೆಯ ಹಂಗಾಮಿ ಅಧ್ಯಕ್ಷರಾಗಿ ಹನುಮಂತರೆಡ್ಡಿ ಇವರು ವಹಿಸಿದ್ದರು.
ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ  ಬಿ.ಟಿ.ಜಗದೀಶ್,

- Advertisement - 

ಉಪಾಧ್ಯಕ್ಷರಾಗಿ ಎಂ.ಸತೀಶ್, ಪ್ರಧಾನ ಕಾರ್ಯದರ್ಶಿಯಾಗಿ  ಕೆ. ಪ್ರಾಣೇಶ್, ಖಜಾಂಜಿಯಾಗಿ ಪಟೇಲ್ ಸಿ.ಶಂಭುಲಿಂಗಪ್ಪ, ಜಿಲ್ಲಾ ಪ್ರತಿನಿಧಿಯಾಗಿ ಆರ್.ಶಶಿಧರ್ ಇವರುಗಳನ್ನು ೨೦೨೫-೨೬ ರಿಂದ ೨೦೨೯-೩೦ ನೇ ಸಾಲಿನವರೆಗೆ ಚಿತ್ರದುರ್ಗ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆಯಾಗಿರುತ್ತಾರೆ ಎಂದು ತಿಳಿಸಿದ್ದಾರೆ.

Share This Article
error: Content is protected !!
";