ಬುದ್ಧ ಜಗತ್ತಿನ ಬೆಳಕು, ಬೌದ್ಧ, ಬಸವ ಧರ್ಮ ಜಾತಿ ರಹಿತ ಧರ್ಮ-ಎಂಬಿಪಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬುದ್ಧ ಜಗತ್ತಿನ ಬೆಳಕು, ಬೌದ್ಧ, ಬಸವ ಧರ್ಮ ಜಾತಿ ರಹಿತ ಧರ್ಮಗಳಾಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಹೇಳಿದರು.

ನಗರದ ಹೊರವಲಯದ ಮುರುಘಾ ಮಠದ ಅನುಭವ ಮಂಟಪದಲ್ಲಿ ಭಾನುವಾರ ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠ, ಸಂತೋಷ್ ಲಾಡ್ ಫೌಂಡೇಷನ್ ಹಾಗೂ ಇಂಡೋ-ಟಿಬೆಟ್ ಸ್ನೇಹ ಸೊಸೈಟಿ ವತಿಯಿಂದ ಆಯೋಜಿಸಿದ್ದ ಬಸವೇಶ್ವರ ನಾಡಿನಲ್ಲಿ ಬುದ್ದನ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

- Advertisement - 

ಚಿತ್ರದುರ್ಗದ ಪರಿಸರವು ಕೂಡ ಬೌದ್ಧ ಧರ್ಮದ ಮಾರ್ಗದಲ್ಲಿ ನಡೆದ ಅಶೋಕನ ಶಾಸನಗಳಿರುವ ನಾಡಾಗಿದೆ. ಈ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನ ಸಂಸ್ಕೃತಿ ನೆಲೆಯೂರಿರುವ ಜಿಲ್ಲೆಯಾಗಿದೆ. ಬುದ್ಧ ಮತ್ತು ಬಸವಣ್ಣ ಇಬ್ಬರೂ ಭಾರತ ಕಂಡ ಶ್ರೇಷ್ಠ ಸಮಾಜ ಸುಧಾರಕರು. ಭಿನ್ನ ದಾರಿಯನ್ನು ತುಳಿದು ಜಾತಿ ರಹಿತವಾದ ಹೊಸ ಧರ್ಮವನ್ನು ಕಂಡುಕೊಂಡವರು. ಇವರಿಬ್ಬರೂ ಕೂಡಾ ದೀನ ದಲಿತರ ಪರವಾಗಿ, ದುರ್ಬಲರ ಪರವಾಗಿ ಧ್ವನಿ ಎತ್ತಿದವರು ಎಂದು ತಿಳಿಸಿದರು.

ಬೌದ್ಧ ಮತ್ತು ಬಸವ ತತ್ವದ ತವರು ಎಂದರೆ ಕರ್ನಾಟಕ. ಅಹಿಂಸೆ, ದಯೆ, ಸಮಾನತೆ, ಮಾನವೀಯತೆ ಮತ್ತು ಕಾರುಣ್ಯ ಇವೇ ಬುದ್ದ ಮತ್ತು ಬಸವಣ್ಣ ಹೇಳಿದ ತತ್ವಗಳಾಗಿವೆ. ಭಾರತ ಐತಿಹಾಸಿಕವಾಗಿ ಬೌದ್ಧ ಧರ್ಮದ ಮತ್ತು ಕರ್ನಾಟಕವು ಬಸವ ಧರ್ಮದ ತವರಾಗಿದೆ. ಸಾತ್ವಿಕ ಧರ್ಮವಾಗಲಿದೆ. ಇವರಿಬ್ಬರೂ ಆವೈದಿಕ ಧರ್ಮಗಳ ಇವೆರಡೂ ಮೂಲಪುರುಷರಾಗಿದ್ದು, ಶ್ರೀಸಾಮಾನ್ಯರ ಧ್ವನಿಯಾಗಿದ್ದಾರೆ ಎಂದರು.

- Advertisement - 

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ನಾವು ಬುದ್ಧ ತತ್ವದ ಕುರಿತು ಮಾತನಾಡುತ್ತೇವೆ ಎಂದಾದರೆ ಅಶೋಕ ಚಕ್ರವರ್ತಿಯನ್ನು ಕಡ್ಡಾಯವಾಗಿ ಸ್ಮರಿಸಬೇಕು. ಬುದ್ಧ ಮತ್ತು ಅಶೋಕ ಚಕ್ರವರ್ತಿ ಇಬ್ಬರು ಒಂದೇ ತತ್ವದ ಮೇಲೆ ನಡೆದವರು ಎಂದು ತಿಳಿಸಿದರು.

ಬುದ್ಧನ ಐಡಿಯಾಲಜಿ ದೇಶದಲ್ಲಿ ಪಾಲನೆ ಮಾಡಿದರೆ ದೇಶ ಸುಸಂಸ್ಕೃತ ಜೊತೆಗೆ ಶಾಂತಿಯುತ ನಾಡಾಗಿ ಪರಿಣಮಿಸುತ್ತದೆ. ಸಮಾಜದಲ್ಲಿ ಮಹಿಳೆಯರಿಗೆ ಸ್ಥಾನಮಾನಗಳನ್ನ ಕೊಡುವುದರ ಮೂಲಕ ಪ್ರತಿಯೊಬ್ಬರೂ ಗೌರವಿಸಬೇಕು. ಹಾಗಾಗಿ ಭಾರತ ಸಂವಿಧಾನದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ಅಂಬೇಡ್ಕರ್ ಅವರು ಕಾನೂನುಗಳ ರೂಪದಲ್ಲಿ ನೀಡಲಾಗಿದೆ ಎಂದು ತಿಳಿಸಿದರು.

ಭಾರತ ಸಂವಿಧಾನದಲ್ಲಿ ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು ದೊರೆಯಬೇಕೆನ್ನುವ ಕಾನೂನು ಜಾರಿಗೆ ತಂದು ಪುರುಷರಷ್ಟೇ ಮಹಿಳೆಯರು ಕೂಡ ಸಮಾನಳು ಎನ್ನುವ ಸಮಾಜಕ್ಕೆ ಸಂದೇಶವನ್ನು ಭಾರತ ಸಂವಿಧಾನ ನೀಡಿದೆ, ಭಗವಾನ್ ಬುದ್ಧರು ಕೂಡ ಶಾಂತಿಯುತ ತತ್ವದರ್ಶಕಗಳ ನಡೆಯಲ್ಲಿ ಜಗತ್ತನ್ನೇ ಗೆದ್ದಿದ್ದಾರೆ, ಹಾಗಾಗಿ ನಾವೆಲ್ಲರೂ ಸಮಾಜವನ್ನು ಬದಲಾವಣೆ ಮಾಡಬೇಕಾದರೆ ಮೊದಲು ನಾವು ಬದಲಾಗಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಹರಿಹರದ ಜಗದ್ಗುರು ಪಂಚಮಸಾಲಿ ಲಿಂಗಾಯತ ಗುರುಪೀಠದ ವಚನಾನಂದ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮುರುಘಾಮಠದ ಡಾ.ಬಸವಕುಮಾರ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ,

ಆಹಾರ ಮತ್ತು  ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್, ಕಾರ್ಮಿಖ ಸಚಿವ ಸಂತೋಷ್ ಎಸ್.ಲಾಡ್, ಶಾಸಕ ಟಿ. ರಘುಮೂರ್ತಿ, ಆದಿ ಜಾಂಬವ ನಿಗಮದ ಅಧ್ಯಕ್ಷ ಮಂಜುನಾಥ್ರಾಜ್ಯಸಭಾ ಮಾಜಿ ಸದಸ್ಯ ಹೆಚ್.ಹನುಮಂತಪ್ಪ, ಕಾಂಗ್ರೆಸ್ ಮುಖಂಡ ಜೆಜೆ ಹಟ್ಟಿ ತಿಪ್ಪೇಸ್ವಾಮಿ ಮುಂಡಗೋಡಿನ ರಿನ್‍ಚೆನ್ ವಾನ್ಗೋ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹಾಗೂ ಇತರರು ಇದ್ದರು.

 

 

 

Share This Article
error: Content is protected !!
";