ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬುಲೆಟ್ ಟ್ರೈನ್ ಕಾಶ್ಮೀರದಿಂದ ಕನ್ಯಾಕುಮಾರಿಗೆ ಹಾದು ಹೋಗುವ ನಕ್ಷೆಯ ಸಿದ್ದವಾಗಿದೆ ಹಾಗೂ ಬೆಂಗಳೂರಿನಿಂದ ದೆಹಲಿಗೆ ರಸ್ತೆ ಮಾರ್ಗದ ಎಕ್ಸ್ ಪ್ರೆಸ್ ಹೈವೆಯ ಮಾರ್ಗಸೂಚಿ ಸಿದ್ದವಾಗಿದೆ.
ಬುಲೆಟ್ ಟ್ರೈನ್ ಸಂಚಾರಿ ಮಾರ್ಗದ ಟ್ರಾಕ್ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಮುಖಾಂತರ ಮುಂದೆ ಸಾಗುತ್ತದೆ. ಇದರಂತೆಯೇ ರಸ್ತೆ ಸಾರಿಗೆ ಹೈವೇ ಪಾವಗಡ ತಾಲ್ಲೂಕಿಗೆ ಹೊಂದಿಕೊಂಡಿರುವ ಸೀಮಾಂಧ್ರದ ಪೆನುಗೊಂಡ ಪುಟ್ಟಪರ್ತಿ ಮೂಲಕ ಬೆಂಗಳೂರು ಸೇರಲಿದೆ.
ಕನ್ಯಾಕುಮಾರಿಯಿಂದ ಕಾಶ್ಮೀರ ತಲುಪುವ ಬುಲೆಟ್ ಟ್ರೈನ್ ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ ಮೂಲಕ ಬೆಂಗಳೂರು ತಲುಪಿ ಅಲ್ಲಿಂದ ಮುಂದೆ ಕನ್ಯಾಕುಮಾರಿಗೆ ಸೇರುವ ನಕ್ಷೆ ಸಿದ್ದವಾಗಿದೆ.
ಸಾರಿಗೆ ಸಂಚಾರ ದೇಶದ ಅಭಿವೃದ್ಧಿಗೆ ಬಹಳಷ್ಟು ಮಹತ್ವವಾದ ಪಾತ್ರವನ್ನು ವಹಿಸುತ್ತವೆ. ದೇಶದ ಹಲವಾರು ಪ್ರಾಂತ್ಯಗಳಲ್ಲಿ ಅತಿ ವೇಗದ ರಸ್ತೆಗಳು ಬಹಳಷ್ಟು ಉತ್ಕೃಷ್ಟ ಗುಣಮಟ್ಟದಲ್ಲಿ ನಿರ್ಮಾಣವಾಗುತ್ತಿವೆ. ಇದು ದೇಶದ ಬೆಳವಣಿಗೆಗೆ ಸಾಕ್ಷಿ ಗುಡ್ಡೆಯಾಗಿದೆ.
ಕೇಂದ್ರ ಸರ್ಕಾರದ ಆಡಳಿತದಲ್ಲಿ ರಸ್ತೆಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರ ಪ್ರಬುದ್ಧತೆಯ ಕಾರ್ಯವೈಖರಿ ದೇಶಾದ್ಯಂತ ಸುದ್ದಿ ಮಾಡುತ್ತಿದೆ.
ಲೇಖನ-ರಘು ಗೌಡ 9916101265