ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಲಿಕಾನ್‌ಸಿಟಿ ಬೆಂಗಳೂರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ವಿಫಲವಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೈಗಾರಿಕೋದ್ಯಮಿಗಳು ಸಿಡಿದೆದ್ದಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.
ಗುಂಡಿ ಬಿದ್ದ ರಸ್ತೆಗಳು, ಅಸಮರ್ಪಕ ಕಸ ವಿಲೇವಾರಿ, ಟ್ರಾಫಿಕ್‌ಸಮಸ್ಯೆಯಿಂದ ಬೆಂಗಳೂರಿನ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದೆ.
ಶೇ.60% ಪರ್ಸೆಂಟ್‌ಕಮಿಷನ್‌ಹೊಡೆದು ಗಡದ್‌ನಿದ್ದೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ ಅವರೇ ನಿಮ್ಮ ಸರ್ಕಾರ ಎದ್ದೇಳುವುದು ಯಾವಾಗ ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಐಟಿ ಬಿಟಿ ಮಿನಿಸ್ಟರ್‌ಪ್ರಿಯಾಂಕ್ ಖರ್ಗೆ ಅವರೇ ಉಪಯೋಗಕ್ಕೆ ಬಾರದ, ನಿಷ್ಪ್ರಯೋಜಕ ಮಾತುಗಳನ್ನು ಬಿಟ್ಟು, ಇಲಾಖೆಯ ಕೆಲಸವನ್ನು ನಿರ್ವಹಿಸಿ. “ಸಾಕಪ್ಪ ಸಾಕು, ಕಾಂಗ್ರೆಸ್‌ಸರ್ಕಾರ” ಎಂದು ಕೈಗಾರಿಕೋದ್ಯಮಿಗಳು, ಟೆಕ್ಕಿಗಳು, ಜನಸಾಮಾನ್ಯರು ರಾಜ್ಯ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಹೈರಾಣಾಗಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.

