ಮಾತಲ್ಲಿ ಬೆಣ್ಣೆ, ಕೈನಲ್ಲಿ ದೊಣ್ಣೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾತಲ್ಲಿ ಬೆಣ್ಣೆ, ಕೈನಲ್ಲಿ ದೊಣ್ಣೆಇದು ವಚನ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕುಟಿಲ ನೀತಿ ಅನುಸರಿಸುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ.

ರಾಜ್ಯದಲ್ಲಿ ನಂದಿನಿ ಹಾಲಿನ ದರ ಲೀ. 4 ರೂ. ಏರಿಸಿ ಜನರಿಗೆ ಬರೆ ಹಾಕಿರುವ ಕಾಂಗ್ರೆಸ್ ಸರ್ಕಾರ, ಹಾಲು ಉತ್ಪಾದಕರಿಗೆ ನೀಡುತ್ತಿದ್ದ ದರದಲ್ಲಿ ಲೀ. 3.50 ರೂ. ಕಡಿತಗೊಳಿಸಿದೆ.

ರೈತರ ಹಿತದೃಷ್ಟಿಯಿಂದ ಹಾಲಿನ ದರ ಏರಿಸಿದ್ದು, 4ರೂ. ಹೆಚ್ಚಳದ ಹಣವನ್ನು ರೈತರಿಗೆ ನೀಡುತ್ತೇವೆ ಎಂದು ಪುಂಗಿಬಿಟ್ಟಿದ್ದ ಸಿಎಂ ಸಿದ್ದರಾಮಯ್ಯ ಅವರೇ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ಪಶುಸಂಗೋಪನಾ ಸಚಿವ  ವೆಂಕಟೇಶ್‌ಅವರೇ ನಿಮಗೆಷ್ಟು ನಾಲಿಗೆ ? ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.

ಬಿರು ಬೇಸಿಗೆ ಕಾರಣ ಜಾನುವಾರುಗಳಿಗೆ ನೀರು-ಮೇವಿನ ಕೊರತೆ ಇದೆ.  ಪಶು ಆಹಾರ ಹಿಂಡಿ, ಬೂಸ​ ಬೆಲೆಗಳು ಕೂಡ ಏರಿಕೆಯಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರದಲ್ಲಿ ಲೀ. 3.5 ರೂ. ಇಳಿಕೆ ಮಾಡಿರುವುದು ಯಾವ ರೀತಿಯ ರೈತರ ಅಭ್ಯುದಯ ಸಿದ್ದರಾಮಯ್ಯ ಅವರೇ ?

 ಒಂದು ಕಡೆ ಹಾಲಿನ ಬೆಲೆ ಏರಿಸಿ, ಮತ್ತೊಂದು ಕಡೆ ಹಾಲು ಉತ್ಪಾದಕರಿಗೆ ದರ ಕಡಿತಗೊಳಿಸಿರುವ ನಿಮ್ಮ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಗೆ ಧಿಕ್ಕಾರ ಎಂದು ಜೆಡಿಎಸ್ ಹರಿಹಾಯ್ದಿದೆ.

 

Share This Article
error: Content is protected !!
";