ನಕಲಿ ನೋಟು ಕೊಟ್ಟು ಕುರಿ ಖರೀದಿ ಮಾಡಿ ಪರಾರಿಯಾದ ಖದೀಮರು

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಚಿಕ್ಕಮಗಳೂರು ಜಿಲ್ಲೆಯ ಕಡೂರು
ತಾಲೂಕಿನ ನಿಡಘಟ್ಟ ಗ್ರಾಮದ ಮಹಿಳೆಯೊಬ್ಬರು ಕುರಿ ಸಾಕಾಣಿಕೆ ಮಾಡಿ ಇದರಿಂದ ಬಂದ ಲಾಭದಲ್ಲಿ ತಮ್ಮ ಜೀವನ ನಡೆಸುತ್ತಿದ್ದರು.

ಯಾರೋ ಅಪರಿಚಿತರು ಈ ಮಹಿಳೆಯಿಂದ ಕುರಿಗಳನ್ನು ಖರೀದಿಸಿ, ಅವರಿಗೆ ಖೋಟಾ ನೀಡಿ ಪರಾರಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಖೋಟಾ ನೋಟು ಜನರ ಕೈಯಲ್ಲಿ ಹರಿದಾಡುತ್ತಿವೆ.

- Advertisement - 

ಕಡೂರು ತಾಲೂಕಿನ ನಿಡಘಟ್ಟ ಗ್ರಾಮದ ಹೇಮಾವತಿ ಎಂಬವರ ಬಳಿ ಅಪರಿಚಿತರು ಕುರಿಗಳನ್ನು ಖರೀದಿಸಿ, ಅವರಿಗೆ ಖೋಟಾ ನೋಟು ನೀಡಿದ್ದಾರೆ. ಕುರಿಗಳನ್ನು ಮಾರಿ ಬಂದ ಹಣವನ್ನು ಹೇಮಾವತಿಯವರು ಎಸ್​ಬಿಐ ಬ್ಯಾಂಕ್​ನಲ್ಲಿರುವ ತಮ್ಮ ಖಾತೆಗೆ ಜಮೆ ಮಾಡಲು ಹೋಗಿದ್ದಾಗ ಖೋಟಾ ನೋಟು ಎಂದು ತಿಳಿದಿದ್ದು ಅವರು ಆತಂಕಕ್ಕೆ ಒಳಗಾಗಿದ್ದಾರೆ.

ಹೇಮಾವತಿ ಅವರು 25 ಸಾವಿರ ರೂಪಾಯಿಗೆ ಕುರಿಗಳನ್ನು ಮಾರಿದ್ದರು. ಈ ಹಣವನ್ನು ಹೇಮಾವತಿಯವರು ಬ್ಯಾಂಕ್​ಗೆ ಜಮೆ ಮಾಡಲು ತೆರಳಿದ್ದಾರೆ. ಈ 25 ಸಾವಿರ ರೂಪಾಯಿಯಲ್ಲಿ 14 ಸಾವಿರ ರೂಪಾಯಿಯಷ್ಟು ನೋಟುಗಳು ಖೋಟಾ ಆಗಿವೆ. 500 ರೂ. ಮುಖಬೆಲೆಯ 28 ನೋಟುಗಳು ನಕಲಿ ಎಂದು ಬ್ಯಾಂಕ್​ ಸಿಬ್ಬಂದಿ ಮಹಿಳೆಗೆ ತಿಳಿಸಿದ್ದಾರೆ.

- Advertisement - 

 

Share This Article
error: Content is protected !!
";