ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರಿನ ಆರ್.ಟಿ ನಗರದಲ್ಲಿರುವ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರರವರು ಭೇಟಿ ಮಾಡಿ ಶ್ರೀ ಜಗದ್ಗುರುಗಳವರ ದಿವ್ಯಾಶೀರ್ವಾದ ಪಡೆದರು.
ಸಮಾಜದ ಯುವ ಮುಖಂಡರು, ಪೀಠದ ಬಗ್ಗೆ ಅಪಾರ ಭಕ್ತಿ ಗೌರವ ಹೊಂದಿರುವ ಬಿ.ವೈ.ವಿಜಯೇಂದ್ರರವರು ಶ್ರೀ ಜಗದ್ಗುರುಗಳವರು ಅಲೌಕಿಕ ಜ್ಞಾನ ಜ್ಯೋತಿಯನ್ನು ಪಸರಿಸುತ್ತಾ, ಸದೃಢ ಹಾಗೂ ಸ್ವಾವಲಂಭಿ ಸಮಾಜ ನಿರ್ಮಾಣದ ಸಂಕಲ್ಪವನ್ನು ಸಾಕಾರಗೊಳಿಸುತ್ತಾ ಸಾಗುತ್ತಿರುವ ಪರಮಪೂಜ್ಯರ ಅಮೂಲ್ಯ ಮಾರ್ಗದರ್ಶನ ಪಡೆಯಲಾಯಿತೆಂದು ಹಂಚಿಕೊಂಡರು.

