ನಂದಿ ಬೆಟ್ಟದಲ್ಲಿಮುಂದಿನ ಸಚಿವ ಸಂಪುಟ ಸಭೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಸಮೀಪದ ನಂದಿಗಿರಿಧಾಮದಲ್ಲಿ ಜೂ.
19ರಂದು ಸಚಿವ ಸಂಪುಟ ಸಭೆ ಆಯೋಜಿಸಲು ಸರ್ಕಾರ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

- Advertisement - 

ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ನಡೆಸುವ ಸಂಬಂಧ ಚರ್ಚಿಸಲಾಗುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ದೃಢಪಡಿಸಿದ್ದಾರೆ.

- Advertisement - 

ನಂದಿ ಬೆಟ್ಟದಲ್ಲಿ ದೊಡ್ಡ ಸಭಾಂಗಣವಿದ್ದು ಅದರಲ್ಲಿ ಸಂಪುಟ ಸಭೆ ನಡೆಸಲು ಬಳಸುತ್ತೇವೆ. ಯಾವುದೇ ಸಮಸ್ಯೆ ಎದುರಾಗದಂತೆ ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಗಣನೀಯವಾಗಿ ನಂದಿ ಬೆಟ್ಟದಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿಗೊಳಿಸಲಾಗಿದೆ. ಇದರಲ್ಲಿ 1986ರಲ್ಲಿ ನಡೆದ ಎರಡನೇ ಸಾರ್ಕ್ ಶೃಂಗಸಭೆಗಾಗಿ ನಿರ್ಮಿಸಲಾದ ಸೌಲಭ್ಯಗಳನ್ನೂ ಸಹ ನವೀಕರಣಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.

- Advertisement - 

ಕಲಬುರಗಿ ಮತ್ತು ಮಲೆ ಮಹದೇಶ್ವರ ಬೆಟ್ಟಗಳಲ್ಲಿ ನಡೆದ ಸಂಪುಟ ಸಭೆಗಳಿಗಿಂತ ನಂದಿ ನಂದಿಬೆಟ್ಟದಲ್ಲಿ ನಡೆಯುವ ಸಂಪುಟ ಸಭೆ ಭಿನ್ನವಾಗಿ ಇರಲಿದೆ. ಅದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ವಿಧಾನಸೌಧದ ಹೊರಗೆ ಸಚಿವ ಸಂಪುಟ ನಡೆಸುವುದು ಹೊಸದಲ್ಲ. ಹಿಂದೆ, ಜೆ.ಎಚ್. ​​ಪಟೇಲ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಮಾಗಡಿ ರಸ್ತೆಯ ತಿಪ್ಪಗೊಂಡನಹಳ್ಳಿ ಅತಿಥಿಗೃಹದಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಎಸ್.ಎಂ. ಕೃಷ್ಣ ಅವರ ಸರ್ಕಾರ ಒಮ್ಮೆ ಸಚಿವ ಸಂಪುಟವನ್ನು ಮೈಸೂರಿನ ಎಚ್.ಡಿ. ಕೋಟೆ ಬಳಿಯ ಹಸಿರಿನ ಹೊರವಲಯ, ಅಂದರೆ ಕೇರಳದ ಮಾನಂತವಾಡಿಗೆ ಹೋಗುವ ಮಾರ್ಗದಲ್ಲಿ ನಡೆದಿತ್ತು. ಇದಲ್ಲದೆ ಆರ್. ಗುಂಡೂರಾವ್ ಅವರ ಆಡಳಿತದಲ್ಲೂ ಬೆಂಗಳೂರಿನಾಚೆಗೆ ಕ್ಯಾಬಿನೆಟ್ ಸಭೆಗಳನ್ನು ನಡೆಸುವ ಪ್ರಯೋಗವನ್ನು ಮಾಡಿತ್ತು ಎಂದು ವಿವರಿಸಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಂಪರ್ಕಿಸಿದಾಗ ತಂದೆ ಗುಂಡೂರಾವ್ ಅವರ ಕಾಲದಲ್ಲಿ, ರಾಜ್ಯದಾದ್ಯಂತ ಎಲ್ಲಾ ಕಂದಾಯ ವಿಭಾಗೀಯ ಕೇಂದ್ರಗಳಲ್ಲಿ – ಕಲಬುರಗಿ, ಬೆಳಗಾವಿ ಮತ್ತು ಮೈಸೂರಿನಲ್ಲಿ – ಕ್ಯಾಬಿನೆಟ್ ಸಭೆಗಳು ನಡೆಯುತ್ತಿದ್ದವು ಎಂದು ಸ್ಮರಿಸಿದರು.

ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುವಾಗ ಪ್ರವಾಸೋದ್ಯಮ, ಸಂರಕ್ಷಣೆ ಮತ್ತು ಮೂಲಸೌಕರ್ಯ ಸೇರಿದಂತೆ ಚಿಕ್ಕಬಳ್ಳಾಪುರ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳು ಕಾರ್ಯಸೂಚಿಯಲ್ಲಿ ಅಗ್ರಸ್ಥಾನದಲ್ಲಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ವೇಗವಾಗಿ ಬೆಳೆಯುತ್ತಿರುವ ನಗರ ಕೇಂದ್ರವಾಗಿರುವ ಚಿಕ್ಕಬಳ್ಳಾಪುರಕ್ಕೆ ತುರ್ತು ಗಮನ ಹರಿಸಬೇಕಾದಂತ ಹಲವಾರು ಮೂಲಸೌಕರ್ಯ ಸಮಸ್ಯೆಗಳನ್ನು ಹೊಂದಿದ್ದು ಅಂದು ನಡೆಯಲಿರುವ ಸಚಿವ ಸಂಪುಟಸಭೆಯಲ್ಲಿ ಹಲವು ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಸುಧಾಕರ್ ಅವರು ಕೋಟೆಯಿಂದ ಬೆಟ್ಟದ ಮೇಲಿರುವ ಸಭೆಯ ಸಭಾಂಗಣಕ್ಕೆ ರಸ್ತೆ ಸಂಪರ್ಕ ಸುಧಾರಿಸಲು ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

Share This Article
error: Content is protected !!
";